ತುಮಕೂರು: ಸದಾ ವಾಹನಗಳ ದಟ್ಟಣೆ ಇರೋ ರಸ್ತೆಯ ಒಂದು ಭಾಗ ದಿಢೀರ್ ಕುಸಿದಿದೆ. ಅಲ್ಲದೆ ಅಮಾಯಕರ ಬಲಿಗಾಗಿ ಕಾದು ಕುಳಿತಂತಿದೆ. ತುಮಕೂರಿನ ಕುಣಿಗಲ್ ರಸ್ತೆಯ ಹೇಮಾವತಿ ಕಚೇರಿ ಮುಂಭಾಗ ಈ ಅವಘಡ ಘಟಿಸಿದೆ. ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ತುಮಕೂರು ನಗರದಲ್ಲಿ ಸಾಕಷ್ಟು ಹಾನಿಯಾಗಿದೆ. ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ನಿರತವಾಗಿದೆ. ಆದರೆ ಇತ್ತ ರಸ್ತೆ ಮಧ್ಯೆ ಆಳವಾದ ಗುಂಡಿ ಬಿದ್ದಿರೋದು ಜನರಲ್ಲಿ ಆತಂಕ ಸಂಚರಿಸುವಂತಾಗಿದೆ. ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿ ಸೃಷ್ಠಿಯಾಗಿದೆ ಅಲ್ಲದೆ ವಾಹನ ಸವಾರರ ಬಲಿಗಾಗಿ ಕಾದು ಕುಳಿತಂತಿದೆ. ಕುಣಿಲ್ ಹಾಗು ತುಮಕೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲೇ ಸಂಚರಿಸಬೇಕು. ಇದೇ ರಸ್ತೆಯಲ್ಲಿ ಪ್ರಮುಖ ಶಾಲಾ ಕಾಲೇಜುಗಳಿವೆ. ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ಮಧ್ಯೆ ಪೊಲೀಸರು ಬ್ಯಾರಿಕೇಟ್ ಇಟ್ಟಿದ್ದಾರೆ. ಆದರೆ ಅದ್ಯಾವಾಗ ಕುಸಿದು ಬೀಳಲಿದೆ ಅನ್ನೋದು ಭಯ ಕಾಡುತ್ತಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಂಡು ರಸ್ತೆ ಸರಿಪಡಿಸಬೇಕಿದೆ. ಈಚೆಗೆ ತುಮಕೂರಿನಲ್ಲಿ ಯಾವುದೇ ರಸ್ತೆ ಗುಂಡಿಗಳು ಇಲ್ಲದ ಅಂತಾ ಪಾಲಿಕೆ ನ್ಯಾಯಾಲಯಕ್ಕೆ ವರದಿ ನೀಡಿತ್ತು.
Previous Articleಶಿವಮೊಗ್ಗ ಸುಬ್ಬಣ್ಣ ನಿಧನ: ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಧಾನಿ ಸಂತಾಪ
Next Article ಲೇಖಕ ಸಲ್ಮಾನ್ ರಶ್ದಿ ಕಣ್ಣಿಗೆ ತೀವ್ರ ಹಾನಿ