ತುಮಕೂರು : ತುಮಕೂರಿನಲ್ಲಿ ಮತ್ತೆ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಕೂಗು ಪ್ರತಿಧ್ವನಿಸಿದೆ. ಇಂದು ಬೆಳಗ್ಗೆ ತುಮಕೂರು ಮೂಲಕ ದಾವಣಗೆರೆಗೆ ತೆರಳುತ್ತಿದ್ದ ಸಿದ್ದರಾಮಯ್ಯ. ಮಾರ್ಗಮಧ್ಯೆ ಸಿದ್ದರಾಮಯ್ಯ ಅವರನ್ನ ಅದ್ದೂರಿಯಾಗಿ ಅವರ ಬೆಂಬಲಿಗರು ಬರಮಾಡಿಕೊಂಡರು. ಕಾರಿನಲ್ಲಿ ಬಂದಿಳಿದ ನೆಚ್ಚಿನ ಸಿದ್ದುಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು. ಅಲ್ಲದೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂದು ಜೈಕಾರ ಕೂಗಿದರು. ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಕಂಠಿ ಮಂಜುನಾಥ್, ಮಾಜಿ ಕಾರ್ಪೊರೇಟರ್ ಕೆಂಪರಾಜು, ಕಮ್ಮನಕೋಟೆ ಶಿವಣ್ಣ ಸೇರಿದಂತೆ ಹಲವು ಬೆಂಬಲಿಗರು ಘೋಷಣೆ ಕೂಗಿದರು. ಬೆಂಗಳೂರು-ಪುಣೆ ಹೆದ್ದಾರಿಯ ತುಮಕೂರಿನ ಡಿ.ಎಮ್.ಪಾಳ್ಯ ಬಳಿ ಸುಮಾರು ಎರಡು ಗಂಟೆಗಳ ಕಾಲ ಸಿದ್ಧುಗಾಗಿ ಕಾದು ನಿಂತಿದ್ದ ಬೆಂಬಲಿಗರು, ಕಾರ್ಯಕರ್ತರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ಥವ್ಯವಾಗಿತ್ತು.
ತುಮಕೂರಿನಲ್ಲಿ ಸಿದ್ದು ಸಿಎಂ ಮೊಳಗಿದ ಪ್ರತಿಧ್ವನಿ
Previous Articleವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಸಹಪ್ರಾಧ್ಯಾಪಕ ಸಸ್ಪೆಂಡ್
Next Article ಕೊನೆಗೂ ಸೆರೆಯಾದ ಖತರ್ನಾಕ್ ಚಿರತೆ