ಬಗರ್ ಹುಕಂ ಜಮೀನು ಉಳಿಮೆ ಮಾಡಿದ ಅನ್ನದಾತ ಮೇಲೆ ಅನಾಗರೀಕರಂತೆ ವರ್ತಿಸಿದೆ ಅರಣ್ಯ ಇಲಾಖೆ. ರಾತ್ರೋರೋತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ತನೆಗೆ ಆಕ್ರೋಶಗೊಂಡಿರೋ ಅನ್ನದಾತರು.. ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಈ ದೃಶ್ಯ ನೋಡಿದ್ರೆ.. ಎಂಥವರಿಗೂ ಒಮ್ಮೆ ಕೋಪ ಬರದೆ ಇರಲಾದರು. ಇವ್ರು ಅರಣ್ಯ ಸಿಬ್ಬಂದಿಗಳು ಅನ್ನದಾತ ಹಾಗು ಆತನ ಕುಟುಂಬದ ಮೇಲೆ ಎರಗಿ ಅನಾಗರೀಕಂತೆ ವರ್ತಿಸಿದ ಘಟನೆ. ಇಂತಹ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಂಚಲದೊರೆಯಲ್ಲಿ. ಹಲ್ಲೆಗೆ ಒಳಗಾದವರು ರೈತ ಬಸವರಾಜು. ಈ ಅವಾಂತರಕ್ಕೆಲ್ಲಾ ಕಾರಣ ರೈತ ಬಸವರಾಜು ಉಳುಮೆ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಅನ್ನೋದು. ಆದ್ರೆ ಬಸವರಾಜು ಇದು ತಮ್ಮ ಪೂರ್ವಜರಿಂದ ಜಮೀನು ಉಳಿಮೆ ಮಾಡುತಿದ್ದೇವೆ. ಕಂದಾಯ ಇಲಾಖೆ ಕೂಡ ಪತ್ರ ನೀಡಿದೆ. ನಾಲ್ಕೈದು ವರ್ಷಗಳಿಂದ ಹೊಟ್ಟೆಬಟ್ಟೆ ಕಟ್ಟಿ ಉಳುಮೆ ಮಾಡಿ ಫಸಲಿಗೆ ಬಂದ ಬೆಳೆಯನ್ನ ನಾಶ ಮಾಡಲು ಮುಂದಾಗಿರುವ ಅರಣ್ಯ ಇಲಾಖೆ ವರ್ತನೆಯನ್ನ ವಿರೋಧಿಸಿದ್ದೆ ಕಾರಣವಾಗಿದೆ.
ಇನ್ನೂ ಬೆಳಿಗ್ಗೆ ಹಲ್ಲೆಗೆ ಒಳದಾದ ರೈತ ಬಸವರಾಜು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ರೈತನ ಮೇಲೆ ದೌರ್ಜನ್ಯ ಖಂಡಿಸಿ ತುಮಕೂರಿನ ಡಿಸಿ ಕಚೇರಿ ಮುಂದೆ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ದೌರ್ಜನ್ಯ ಎಸಗಿದ ಅರಣ್ಯ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಗುಬ್ಬಿ ತಾಲೂಕಿನಲ್ಲೇ ಅರಣ್ಯ ಇಲಾಖೆ ಒತ್ತುವರಿ ತೆರವಿನ ಹೆಸರಿನಲ್ಲಿ ನಿರಂತವಾಗಿ ದೌರ್ಜನ್ಯ ಎಸಗುತ್ತಿದೆ. ಆ ಮೂಲಕ ರೈತರ ಆಕ್ರೋಶಕ್ಕೂ ಗುರಿಯಾಗುತ್ತಿದೆ. ಕಾನೂನಿನ ಹೆಸರಿನಲ್ಲಿ ಅನಾಗರೀಕಂತೆ ವರ್ತಿಸುವ ಬದಲು ಸೌಜನ್ಯದಿಂದ ವರ್ತಿಸೋದು ಕೂಡ ಇಲಾಖೆ ಕಲಿಯಬೇಕಿದೆ.
ರೈತನ ಮೇಲೆ ಅನಾಗರೀಕರಂತೆ ವರ್ತಿಸಿದ ಅರಣ್ಯ ಸಿಬ್ಬಂದಿ..!
Previous Articleಪಠಾಣ್ ಲೇಡಿ ದೀಪಿಕಾ ಪಡುಕೋಣೆ ಮೋಷನ್ ಪೋಸ್ಟರ್ ಔಟ್
Next Article ದೃಷ್ಟಿ ವಿಶೇಷ ಚೇತನ ಬಾಲಕಿಗೆ CBSEಯಲ್ಲಿ 496/500 ಅಂಕ