ತುಮಕೂರು : ಆರೋಪಗಳು ಶಿವ, ಬ್ರಹ್ಮ, ಕೃಷ್ಣನನ್ನೇ ಬಿಟ್ಟಿಲ್ಲ. ಶಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು. ಅಂತಹದರಲ್ಲಿ ಮೋದಿಯನ್ನ ಬಿಡ್ತರಾ? ಎಂದು ರಾಜ್ಯ ಸಭಾ ಸದಸ್ಯ ಜಗ್ಗೇಶ್ ಲಾಂಚನ ತಿರುಚಿದ ಆರೋಪ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಪತ್ನಿ ಪರಿಮಳ ಸಮೇತ ಭೇಟಿ ನೀಡಿದ ಜಗ್ಗೇಶ್ ಗುರು ಪೂರ್ಣಿಮ ದಿನದಂದು ಗುರುಗಳ ದರ್ಶನ ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರ ಪ್ರತಿಕ್ರಿಯಿಸಿದ ಜಗ್ಗೇಶ್, ಈ ರಾಷ್ಟ್ರದ ಜನ ಎದ್ದೆಯುಬ್ಬಿಸಿ ಹೇಳಬೇಕಾದ ಒಳ್ಳೆ ಧೀಮಂತ ನಾಯಕ ಸಿಕ್ಕಿದ್ದಾನೆ. ಘರ್ಜಿಸುತ್ತಿರುವ ಆ ಸಿಂಹ ಆಯಪ್ಪನೇ ಮೋದಿ. ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ ಎಂದಿದ್ದಾರೆ. ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು. ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೇ ಘರ್ಜನೆ ಮಾಡುತ್ತಿದೆ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ. ಆರಾಧಿಸುವವರ ಸಂಖ್ಯೆ 98% ಇದೆ. ವಿರೋಧಿಸುವವರ ಸಂಖ್ಯೆ 2% ಇದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ.
Previous Articleಸಖತ್ ಸದ್ದು ಮಾಡ್ತಿದೆ ಮಾನ್ಸೂನ್ ರಾಗದ ರಾಗ ಸುಧಾ ಸಾಂಗ್!
Next Article ಮನೆಯಲ್ಲಿ ನವಿಲನ್ನು ಸಾಕಿದ ಭೂಪ..!!