ವಿದ್ಯಾಬ್ಯಾಸಕ್ಕೆ ಕಾಲೇಜಿಗೆ ಬರುತಿದ್ದ ವಿದ್ಯಾರ್ಥಿನಿಯರನ್ನ ಚುಡಾಯಿಸುತ್ತಾ ಕಾಲ ಕಳೆಯುತಿದ್ದ ರೋಡ್ ರೋಮಿಯೋಗಳಿಗೆ ಖಾಕಿ ಪುಲ್ ಕ್ಲಾಸ್ ತೆಗೆದುಕೊಂಡಿದೆ. ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ಓಡಾಡುತಿದ್ದ ವಿದ್ಯಾರ್ಥಿಗಳನ್ನು ಕೀಟಲೆ ಮಾಡುತಿದ್ದ ಪುಂಡರಿಗೆ ಪಿಎಸ್‌ಐ ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗು ಪ್ರೌಢಶಾಲಾ ವಿಭಾಗದ ಶಾಲೆ – ಕಾಲೇಜುಗಳಿಗೆ ಹೆಣ್ಣು ಮಕ್ಕಳು ಹೆಚ್ಚಾಗಿ ಬರುತ್ತಿದ್ದಾರೆ. ಕೆಲ ಪುಂಡರು ಕಾಲೇಜು ಪ್ರಾರಂಭ ಹಾಗು ಬಿಡುವಾಗ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಹಾಗು ಗೋಡೆಯ ಮೇಲೆ ಹೆಣ್ಣು ಮಕ್ಕಳ ಹೆಸರು ಬರೆಯುವುದು ಹಾಗು ಪ್ರೀತಿಸು ಅಂತ ಹಿಂದೆ ಬಿದ್ದು ಚುಡಾಯಿಸುತ್ತಿದ್ದರು. ಈ ವಿಷಯವನ್ನು ತಿಳಿದು ಪಿಎಸ್ ಐ ಕೆ.ಟಿ. ರಮೇಶ್ ಮಧ್ಯಾಹ್ನ ದಿಢೀರ್ ಭೇಟಿ ನೀಡಿದರು. ಕಾಲೇಜಿನ ಆವರಣದಲ್ಲಿ ಓಡಾಟ ನಡೆಸುತ್ತಿದ್ದ ಪುಂಡರನ್ನು ಅಟ್ಟಾಡಿಸಿದರು. ಅನುಮಾನ ಬರುವಂತೆ ನಡೆದುಕೊಳ್ಳುವ ಯುವಕ ಪೂರ್ವಪರ ವಿಚಾರಿಸಿದರು.
ಪುಂಡರು ನಿಮ್ಮನ್ನು ಚುಡಾಯಿಸಿದರೆ, ೧೧೨ ಕರೆ ಮಾಡುವಂತೆ ಪಿಎಸ್ಐ ಕೆ.ಟಿ. ರಮೇಶ್ ಹೆಣ್ಣುಮಕ್ಕಳನ್ನು ಧೈರ್ಯ ತುಂಬಿದರು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ನಿಮ್ಮ ಸ್ನೇಹಿತರನ್ನು ಕಾಲೇಜು ಆವರಣಕ್ಕೆ ಕರೆದುಕೊಂಡು ಬರುವುದನ್ನು ಕೈ ಬಿಡಬೇಕು. ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡದೇ ಪಾಠ – ಪ್ರವಚನದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಮೊದಲ ಬಾರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Previous Articleಪ್ರವೀಣ್ ಹತ್ಯೆ: ತುಮಕೂರಿನಲ್ಲಿ ವಿವಿಧ ಮೋರ್ಚಾಗಳಿಗೆ ಸಾಮೂಹಿಕ ರಾಜೀನಾಮೆ
Next Article ಶಿವಕುಮಾರ್ ಅವರಿಗೆ ಕಾದಿದೆಯಾ ಸಂಕಷ್ಟ…!?