ತುಮಕೂರು : ಖಾಸಗಿ ಬ್ಯಾಂಕ್ ಗಳಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ನೂರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿ ಪೊಲೀಸ್ ಪೇದೆ ಹಾಗು ಆತನ ಹೆಂಡತಿ ಒಂದೂವರೆ ಕೋಟಿಗೂ ಅಧಿಕ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ. ತುಮಕೂರಿನಲ್ಲಿ ನಡೆದ ಘಟನೆಯಿಂದ ಹಣ ಕಳೆದುಕೊಂಡವರು ಕಂಗಾಲಾಗಿದ್ದಾರೆ.
ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಪೇದೆ ಆರ್.ಮಹೇಶ್ ಈತನ ಪತ್ನಿ ಮುಗ್ಧರನ್ನ ಮರಳು ಮಾಡಿ ಒಬ್ಬರಿಂದ ಲಕ್ಷಾಂತರ ಹಣ ಪಡೆದಿದ್ದಾರೆ. ಈಗ ರಾತ್ರೋ ರಾತ್ರಿ ಮನೆ ಖಾಲಿ ಮಾಡಿ ಪರಾರಿಯಾಗಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಆಗಿರುವ ಆರ್ ಮಹೇಶ್ ಠಾಣೆಗೆ ದೂರು ನೀಡಲು ಬರುವವರ ಹಾಗು ತನ್ನ ಸುತ್ತಮುತ್ತಲ ಜನರ ವಿಶ್ವಾಸಗಳಿಸುತಿದ್ದ.
ಉತ್ತಮ ವಿಶ್ವಾಸದ ಖಾತರಿಯಾಗುತಿದ್ದಂತೆ ನಿಮಗೆ ಅಥವ ನಿಮ್ಮ ಸಂಬಂಧಿಕರಿಗೆ ಬ್ಯಾಂಕ್ ಗಳಲ್ಲಿ ಒಳ್ಳೆ ಕೆಲಸ ಕೊಡುವ ಆಮಿಷ ಒಡ್ಡುತಿದ್ದ. ಕೆಲಸಕ್ಕೆ ಸೇರಿಸಲು ಇಂದಿಷ್ಟು ಹಣ ಕೊಡಬೇಕು, ಇಲ್ಲದಿದ್ದರೆ ಕೆಲಸ ಬೇರೆಯವರ ಪಾಲಾಗಲಿದೆ ಎಂದು ಹೇಳಿ ಬಿಡುತ್ತಿದ್ದ. ಕೆಲಸ ಕೈ ತಪ್ಪು ಭಯದಿಂದ ವಂಚಕ ಪೊಲೀಸ್ ಮಹೇಶ್ ಕೇಳಿದಷ್ಟು ಹಣ ಕೊಡಲು ಮುಂದಾಗುತ್ತಿದ್ದರು.
ಇದನ್ನ ಬಂಡವಾಳ ಮಾಡಿಕೊಂಡ ಮಹೇಶ್ ಸುಮಾರು 100 ಜನರಿಂದ ಹಣ ಪಡೆದುಈಗ ಟೋಪಿ ಹಾಕಿದ್ದಾನೆ. ಕೆಲಸ ಹುಡುಕುತ್ತಿರೋದು,ನಿರುದ್ಯೋಗಿಗಳು ಆಕ್ಸಿಸ್ ಬ್ಯಾಂಕ್, ಕಾರ್ಪೋರೇಷನ್ ಹಾಗು ಐಸಿಐಸಿ ಬ್ಯಾಂಕ್ ಗಳಲ್ಲಿ ಕೆಲಸದ ಆಸೆಯಿಂದ ದಿನ ದೂಡುತಿದ್ದರು. ತಿಂಗಳು ಕಳೆದರು ಹಣವೂ ಇಲ್ಲ ಕೆಲಸವೂ ಇಲ್ಲದೆ ಅನುಮಾನಗೊಂಡ ವಂಚನೆಗೆ ಒಳಗಾದವರು ಹಾಗು ಕನ್ನಡ ಪರ ಸಂಘನೆಗಳು ಆತನ ಮನೆ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈತನ ವಂಚನೆ ಕೇವಲ ಜನಸಾಮಾನ್ಯರಲ್ಲದೆ ಪೊಲೀಸರು ಕೂಡ ಈತನ ವಂಚನೆಯ ಜಾಲಕ್ಕೆ ಸಿಲುಕಿದ್ದಾರೆ.
ತಲೆ ಮರೆಸಿಕೊಂಡಿರುವ ಆರೋಪಿ ವಂಚಕ ಮಹೇಶ್ ವಿರುದ್ಧ ದೂರುದಾಖಲಾಗಿದೆ. ದಕ್ಷತೆಯ ಇಲಾಖೆಯಲ್ಲಿ ಇರುವ ವ್ಯಕ್ತಿಯ ವಿರುದ್ಧ ಕಾನೂಕ್ರಮ ಕೈಗೊಳ್ಳಬೇಕಿದೆ. ನೊಂದವರಿಗೆ ನ್ಯಾಯ ಕೊಡಿಸಬೇಕಿದೆ.