ತುಮಕೂರು: ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವಿನ ಕಿರಿಕ್ ಲಾಂಗ್ ತೋರಿಸಿ ಬೆದರಿಸಿದ್ದಲ್ಲದೆ ಓರ್ವ ವಿದ್ಯಾರ್ಥಿಯನ್ನು ಗಾಯಗೊಳಿಸಿದ ಘಟನೆ ಗುಬ್ಬಿ ಸಿ.ಐ.ಟಿ ಕಾಲೇಜು ಹಿಂಬದಿ ಹೆದ್ದಾರಿ ಬಳಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಐ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳ ನಡುವೆ ಕ್ರಿಕೆಟ್ ಬೆಟ್ಟಿಂಗ್ ವಿಚಾರ ಕಿರಿಕ್ ಗೆ ಕಾರಣವಾಗಿದೆ.
ರವಿ ಮತ್ತು ರೋಹಿತ್ ಇಬ್ಬರ ವಿದ್ಯಾರ್ಥಿಗಳ ಮಧ್ಯೆ ಬೆಟ್ಟಿಂಗ್ ವಿಷಯದಲ್ಲಿ ಮಾತಿನ ಚಕಮಕಿ ಹಿನ್ನಲೆ ಶನಿವಾರ ಬೆಳಿಗ್ಗೆ ಸುಮಾರು 11.30 ರಲ್ಲಿ ಎಂಟು ಜನ ಯುವಕರ ಗುಂಪು ಕಾಲೇಜು ಹಿಂಬದಿ ಕಾದು ಕುಳಿತಿದ್ದರು. ನಂತರ ಇದೇ ವಿಚಾರವನ್ನು ಚರ್ಚಿಸಲು ಕಾಲೇಜು ಹಿಂಬದಿ ತೆರಳಿದ ಸಂದರ್ಭದಲ್ಲಿ ಮತ್ತೆ ಮಾತಿನ ಚಕಮಕಿ ನಡೆದಿದೆ. ಆ ಗಲಾಟೆಯಲ್ಲಿ ಏಕಾಏಕಿ ಲಾಂಗ್ ಮಚ್ಚು ಹೊರ ತೆಗೆದ ಕಿಡಿಗೇಡಿಗಳು ವಿದ್ಯಾರ್ಥಿ ಸುರಾಗ್ ಬೀಸಿ ಗಾಯಗೊಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿ ಸುರಾಗ್ ಆತಂಕದಲಿದ್ದಾನೆ. ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಲ್ಲಿ ಸಹ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಧಾವಿಸಿದ ಗುಬ್ಬಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.