ತುಮಕೂರು: ಒಂದು ಸಮುದಾಯದ ಜೊತೆ ಇನ್ನೊಂದು ಸಮುದಾಯವನ್ನ ಹೋಲಿಕೆ ಮಾಡುವಂತಾದ್ದು ಶೋಭೆ ತರುವಂತ ವಿಚಾರ ಅಲ್ಲ. ಒಕ್ಕಲಿಗ ಸಮುದಾಯದವರು ಕೂಡ ಅವರ ಹೇಳಿಕೆಯನ್ನ ವಿರೋಧಿಸಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ ಆರೋಗ್ಯ ಸಚಿವ ಸುಧಾಕರ್. ತುಮಕೂರಿನಲ್ಲಿ ಮಾತನಾಡಿದ ಅವರು, ಹೋಲಿಕೆ ಮಾಡಿ ವರ್ಗೀಕರಣ ಮಾಡುವುದನ್ನ ನಾನೂ ಕೂಡ ವಿರೋಧಿಸಿದ ಸಚಿವರು, ಹೋಲಿಕೆ ಮತ್ತಿ ವರ್ಗೀಕರಣ ಹಾಗೂ ಧರ್ಮ, ವರ್ಗ ಮತ್ತು ಜಾತಿಗಳ ಮಧ್ಯೆ ಬಿರುಕನ್ನ ಉಂಟು ಮಾಡುವುದು ಕಾಂಗ್ರೆಸ್ ನ ಹುಟ್ಟುಗುಣ. ಜಾತಿಜಾತಿಗಳ ಮಧ್ಯೆ ಕಂದಕ ತೋಡುವ ಕೆಲಸ ಮಾಡಿ ಈಗ ಭಾರತ್ ಜೋಡೋ ಕೆಲಸ ಮಾಡುತ್ತಿದ್ದಾರೆ. ಇದು ಹಾಸ್ಯಸ್ಪದವಾಗಿದೆ ಎಂದಿದ್ದಾರೆ. ಇನ್ನೂ ವಿಜಯೇಂದ್ರ ಸ್ಪರ್ಧೆ ವಿಚಾರ ಅದು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವಿಜಯೇಂದ್ರಗೆ ಎಲ್ಲಿ ಹೇಗೆ ಯಾವ ಸ್ಥಾನಮಾನ ಕೊಡಬೇಕು ಅಂತೇಳಿ ಹೈ ಕಮಾಂಡ್ ಬಿಎಸ್ ವೈ ಜೊತೆ ಚರ್ಚೆ ಮಾಡುತ್ತದೆ. ಅವರು ಒಬ್ಬ ಉದಯೋನ್ಮುಖ ರಾಜಕಾರಣಿ ಮತ್ತು ನಾಯಕ ಎಂದಿದ್ದಾರೆ.