ತುಮಕೂರು: ಪುರಾತನ ದೇವಸ್ಥಾನದಲ್ಲಿ ನಿಧಿ ಹುಡುಕುತಿದ್ದ ಐವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆ ಯಲ್ಲಿ ನಡೆದಿದೆ. ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕಳೆದ ತಡರಾತ್ರಿ ಸಿಕ್ಕಿಬಿದ್ದ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.
ಘಟನೆ ಹಿನ್ನೆಲೆ ; ಗ್ರಾಮದಲ್ಲಿನ 700 ವರ್ಷಗಳಷ್ಟು ಹಳೆಯದಾದ ಚೋಳಪುರ ಅಂಜನೇಯ ದೇವಸ್ಥಾನದಲ್ಲಿ ನಿಧಿ ಚೋರರ ಗುಂಪೊಂದು ನಿಧಿ ಶೋಧನೆ ನಡೆಸುತ್ತಿತ್ತು.
ದೇವಸ್ಥಾನಕ್ಕೆ ಟೈಲ್ಸ್ ಹಾಕುವ ನೆಪದಲ್ಲಿ ದೇವಾಲಯ ಪ್ರವೇಶಿಸಿದ್ದ ಐವರು ಆರೋಪಿಗಳು ದೇವಾಲಯದಲ್ಲಿ ಗುಂಡಿ ತೋಡಿ ನಿಧಿ ಶೋಧನೆ ಮಾಡುತ್ತಿದ್ದರು.
ಈ ವೇಳೆ ಗ್ರಾಮಸ್ಥರಿಗೆ ಅನುಮಾನ ಮೂಡಿದ್ದು, ಕಳ್ಳರ ಸಂಚನ್ನು ಅರಿತು ಕೂಡಲೇ ಅವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಸ್ಥಳಕ್ಕೆ ಪೋಲಿಸರನ್ನು ಕರೆಸಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಗಳು ನೆರೆಯ ಆಂಧ್ರಪ್ರದೇಶದ ಕಂದೂರು, ಅನಂತಪುರ ವ್ಯಾಪ್ತಿಯ ಮುರುಳಿ, ನಾಗರಾಜ್, ಚಿನ್ನರೆಡ್ಡಿ, ವೆಂಕಟರಮಣಪ್ಪ, ಸಾಯಿಮುರುಳಿ ಎಂದು ತಿಳಿದುಬಂದಿದೆ.
ಪಾವಗಡ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೇವಾಲಯದಲ್ಲಿ ಗುಂಡಿ ತೋಡಿ ನಿಧಿ ಶೋಧನೆ ಮಾಡಿ ಕಳ್ಳತನಕ್ಕೆ ಇಳಿದ ಕಳ್ಳರು..!
Previous Articleಒಲಿಂಪಿಕ್ ಪದಕ ವಿಜೇತೆಗೆ ಕಿರುಕುಳ
Next Article ರಣವೀರ್ ಸಿಂಗ್ ಅಶ್ಲೀಲ ಚಿತ್ರಗಳ ವಿರುದ್ಧ ಕ್ರಮಕ್ಕೆ ಒತ್ತಾಯ