ಕೆಜಿಎಫ್ 2 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಯಶ್ ಮುಂದಿನ ಚಿತ್ರಕ್ಕೆ ಇಡೀ ಇಂಡಿಯಾನೇ ಕಾಯುತ್ತಿದೆ. ಹೀಗಾಗಿ ಯಶ್ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದೀಗ ಅವರ 19ನೇ ಚಿತ್ರದ ಪೋಸ್ಟರ್ ಲೀಕ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಪೋಸ್ಟರ್ನಲ್ಲಿ ಉದ್ದ ಕೂದಲು ಬಿಟ್ಟು ಮಾಸ್ ಲುಕ್ ನಲ್ಲಿ ಕಾಣಿಸಿದ್ದಾರೆ. ತುಂಬಾ ಡಿಫರೆಂಟ್ ಆಗಿಯೇ ಕಾಣಿಸಿರೋ ರಾಕಿ ಭಾಯ್ ಹೊಸ ಅವತಾರಕ್ಕೆ ಅಭಿಮಾನಿಗಳು ಸಹ ಸಖತ್ ಕಾಮೆಂಟ್ ಮಾಡ್ತಿದ್ದಾರೆ.