ಬೆಂಗಳೂರು,
ಕಂದಾಯ ಇಲಾಖೆ ಅಧಿಕಾರಿಗಳು ಸೋಮಾರಿತನ ಬಿಟ್ಟು ಬರುವ ಮಾರ್ಚ್ ಅಂತ್ಯದೊಳಗೆ ದರ್ಖಾಸ್ತು ಪೋಡಿ ಮತ್ತು ಫೌತಿ ಖಾತೆಗಳನ್ನು ಪೂರ್ಣಗೊಳಿಸಬೇಕು ಎಂದು ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಸೂಚನೆ ನೀಡಿದ್ದಾರೆ.
ಚಿತ್ರದುರ್ಗ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ರಾಜ್ಯದ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ತಿಂಗಳಿಗೆ 100 ಫೌತಿ ಖಾತೆಗಳನ್ನು ಪೂರ್ಣಗೊಳಿಸಬೇಕು ಎಂದು ಗುರಿ ನೀಡಿದರು.
ಕಂದಾಯ ಇಲಾಖೆ ಜನಸಾಮಾನ್ಯರ ಇಲಾಖೆಯಾಗಿ ಕೆಲಸ ಮಾಡಬೇಕಾಗಿದೆ ಇದಕ್ಕಾಗಿ ಪ್ರತಿಯೊಬ್ಬ
ಗ್ರಾಮ ಆಡಳಿತ ಅಧಿಕಾರಿಗಳಿಗೆ ತಿಂಗಳಿಗೆ 100 ಫೌತಿಖಾತೆ ಗುರಿಯನ್ನು ನಿಗದಿ ಮಾಡಲಾಗಿದೆ. ಹಲವು ವರ್ಷಗಳಿಂದ ಬಾಕಿ ಇರುವ ಪೌತಿ ಖಾತೆಗಳನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ಈ ಗುರಿ ನೀಡಲಾಗಿದೆ ಎಂದು ಹೇಳಿದರು
ಈ ಗುರಿಯನ್ನ ನಾನೇನು ಗಾಳಿಯಿಂದ ಸೃಷ್ಟಿಸಿ ನಿಗದಿ ಮಾಡಿದಲ್ಲ ಹಲವೆಡೆ ಗ್ರಾಮ ಆಡಳಿತ ಅಧಿಕಾರಿಗಳು ಮಾಡಿರುವ ಸರಾಸರಿ ಕೆಲಸದ ಷಆಧಾರದಲ್ಲಿ ಈ ಗುರಿ ನಿಗದಿ ಮಾಡಲಾಗಿದೆ.ಆದರೆ, ಕೆಲವರು ತಿಂಗಳಿಗೆ 100 ಕೇಸ್ ಮಾಡಲು ಆಗಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು ಕೆಲವು ಅಧಿಕಾರಿಗಳು ದಿನಕ್ಕೆ 10 ಕೇಸ್ ಮಾಡುವಾಗ ಉಳಿದವರಿಂದ ಏಕೆ ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಮಾಡುತ್ತಲೇ ಇರಬೇಕು, ಉಳಿದವರು ಮಜಾ ಮಾಡಬೇಕಾ ಎಂದು ಕೆಲವು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದ ಅವರು ಎಲ್ಲರೂ ನಿಗಧಿತ ಅವಧಿಯೊಳಗೆ ಕೆಲಸ ಮಾಡುವ ಮೂಲಕ ಜನರ ಕಷ್ಟಗಳನ್ನು ದೂರ ಮಾಡಬೇಕು ಎಂದು ಹೇಳಿದರು.
Previous Articleಟಿ.ಆರ್.ಪಿ ಸುಮಾರು ಕಲರ್ಸ್ ಕನ್ನಡ ಢಮಾರು!
Next Article RCB ತಂಡ ಯಾರ ಪಾಲಾಗಲಿದೆ?


1 ಟಿಪ್ಪಣಿ
Ready to win big? Join Betano https://betanogame.org/ today and unlock an incredible welcome package worth up to €500. Play the hottest casino games from NetEnt, Pragmatic Play and Evolution Gaming. With fast payouts and 24/7 support, your adventure starts now at Betano.