ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿ ಇಡೀ ವಿಶ್ವವೇ ಮೆಚ್ಚಿಕೊಂಡ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಜಗತ್ತಿಗೆ ಮೆಚ್ಚುಗೆಯಾಗಿದೆ. ಕೆಜಿಎಫ್ ಮೂಲಕ ಹೊಸ ಹೊಸ ರೀತಿ ಪ್ರಯತ್ನಗಳನ್ನ ಮಾಡಿದ ತಂಡ ಇದೀಗ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ರಾಕಿ ಭಾಯ್ ಹಾಗೂ ಕೆಜಿಎಫ್ ಚಿತ್ರವನ್ನ ಉಳಿಸುವಂತೆ ಮಾಡಲು ನಿರ್ಧಾರ ಮಾಡಿದೆ. ಹೊಂಬಾಳೆ ಸಂಸ್ಥೆ ಭಾರತದ ಮೊದಲ ಚಲನಚಿತ್ರ ಸಂಗ್ರಹಣೆಯ ಸರಣಿಯೊಂದಿಗೆ ಕೆಜಿಎಫ್‌ವರ್ಸ್ ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿದೆ. ರಾಕಿ ಸಾಮ್ರಾಜ್ಯದಲ್ಲಿದ್ದ ಭರ್ಜರಿ ಕಾರುಗಳು, ಶಕ್ತಿಯುತ ಸುತ್ತಿಗೆಗಳು, ಬೈಕ್‌ಗಳು ಮತ್ತು ಎಲ್ಲಾ ದೊಡ್ಡ ಗನ್‌ಗಳ ಗಾಡ್‌ಫಾದರ್, ದೊಡಮ್ಮ ಹಾಗೂ ರಾಕಿ ಇಷ್ಟನ್ನು ವಸ್ತುಗಳ ರೂಪದಲ್ಲಿ ನೀವು ಖರೀದಿ ಮಾಡಬಹುದಾಗಿದೆ. ಒಂದೊಂದಕ್ಕೆ ಒಂದೊಂದು ಬೆಲೆ ನಿಗಧಿ ಮಾಡಿದ್ದು ಸಿಲೈ ಅವ್ರ ವೆಬ್ ಸೈಟ್ ನಿಂದ ರಾಕಿ ಸಾಮ್ರಾಜ್ಯದ ವಸ್ತುಗಳನ್ನ ಖರೀದಿ ಮಾಡಬಹುದು.
Previous Articleಅಪ್ಪು ಮೇಲಿನ ಅಭಿಮಾನಕ್ಕೆ ಕೆಲಸಬಿಟ್ಟ ಗನ್ ಮ್ಯಾನ್
Next Article ACB ಹೆಸರಲ್ಲಿ ವಸೂಲಿ ದಂಧೆ..