ಉಡುಪಿ, ಸೆ.1- ಖಾಸಗಿ ಹೋಟೆಲ್ ನಲ್ಲಿ ಕ್ಯಾಟರಿಂಗ್ ಉದ್ಯೋಗ ಮುಗಿಸಿ ಮಣಿಪಾಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಲ್ಸಂಕ ಜಂಕ್ಷನ್ ಬಳಿ ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿದ್ದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಜಕ್ರೀಯಾ, ರಜೀಂ, ಖಾಲೀದ್, ರೆಹಮಾನ್ ಬಂಧಿತ ಆರೋಪಿಗಳಾಗಿದ್ದಾರೆ.ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಬ್ರೈಟಿಲ್ ಬಿಜು ಮತ್ತು ಮಹಮ್ಮದ್ ಸಿನಾನ್ ಕರಾವಳಿ ಬೈಪಾಸ್ ಬಳಿಯಿರುವ ಮಣಿಪಾಲ್ ಇನ್ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಲ್ಸಂಕ ಜಂಕ್ಷನ್ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಬಂದ ಕಾರಿಗೆ ಕೈ ಸನ್ನೆ ಮಾಡಿ ಡ್ರಾಪ್ ಕೇಳಿದ್ದಾರೆ.
ಈ ಸಂದರ್ಭದಲ್ಲಿ ಆಗಂತುಕರು ಕಾರು ನಿಲ್ಲಿಸಿದ್ದು ಕಾರನೊಳಗೆ ವಿಪರೀತ ವಾಸನೆ ಬರುತ್ತಿದ್ದರಿಂದ ವಿದ್ಯಾರ್ಥಿಗಳು ಕಾರಿನಲ್ಲಿ ತೆರಳಲು ನಿರಾಕರಿಸಿದ್ದಾರೆ ಇದರಿಂದ ಕುಪಿತಗೊಂಡ ಆಗಂತುಕರು ಚಾಕು ತೋರಿಸಿ ಇಬ್ಬರನ್ನು ಒತ್ತಾಯಪೂರ್ವಕವಾಗಿ ಕಾರೊಳಗೆ ಸೇರಿಸಿಕೊಂಡು ಅಪಹರಣ ಮಾಡಿದ್ದಾರೆ.
ನಂತರ ಇವರ ಮೊಬೈಲ್ ಕಿತ್ತುಕೊಂಡು ದೊಡ್ಡಣಗುಡ್ಡೆಯ ಪಾರ್ಕ್ ನಲ್ಲಿ ಇಬ್ಬರಿಗೆ ಹಲ್ಲೆ ನಡೆಸಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಒಬ್ಬಾತ ತಪ್ಪಿಸಿಕೊಂಡು ಬಂದು ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕಾಪು, ಶಿರ್ವದಲ್ಲಿ ಸುತ್ತಾಡಿಸಿ ಕಾರಿನಲ್ಲೇ ಹಲ್ಲೆ ನಡೆಸಿದ್ದಾರೆ. ಶಿರ್ವ ಬಳಿ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous Articleರೈತನ ಮೇಲೆರಗಿದ ಕರಡಿಗಳು..
Next Article ಮುರುಘಾ ಶರಣರ ವಿರುದ್ಧ ಮತ್ತೊಂದು ಪ್ರಕರಣ