ಇಂಗ್ಲೆಂಡಿನ ರಾಜ ಮೂರನೇ ಚಾರ್ಲ್ಸ್ (King Charles) ಅವರು ಇತ್ತೀಚಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪ್ರಾಸ್ಟೇಟ್ ಗೆ ಸಂಬಂಧಪಟ್ಟ ಚಿಕಿತ್ಸೆಗಾಗಿ ಮತ್ತು ಅದನ್ನು ಸರಿಪಡಿಸಲಾಗಿತ್ತು ಎಂದು ಹೇಳಾಲಾಗಿತ್ತು. ಆ ನಂತರ ಪ್ರಾಸ್ಟೇಟ್ ಬಗ್ಗೆ ಜನ ಹೇಗೆ ಕಾಳಜಿ ವಹಿಸಿ ಆ ಗ್ರಂಥಿಯ ಸಮಸ್ಯೆ ಉಲ್ಬಣವಾಗುವುದಕ್ಕೆ ಮೊದಲೇ ಅದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ರಾಜ ಚಾರ್ಲ್ಸ್ ಕೂಡ ಜನತೆಯಲ್ಲಿ ಮನವಿ ಮಾಡಿದ್ದರು.
ಇಂಗ್ಲೆಂಡಿನ ಜನ ಮತ್ತು ರಾಜ ಚಾರ್ಲ್ಸ್ಸ್ ಅವರ ವಿಶ್ವದಾದ್ಯಂತ ಇರುವ ಅಸಂಖ್ಯಾತ ಅಭಿಮಾನಿಗಳು ರಾಜನ ಆರೋಗ್ಯ ಸರಿಯಾಯಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಹೊರಬಂದಿರುವ ಇಂಗ್ಲೆಂಡಿನ ಅರಮನೆಯ ಹೇಳಿಕೆ ಪ್ರಕಾರ ರಾಜ ಮೂರನೇ ಚಾರ್ಲ್ಸ್ ಗೆ ಕ್ಯಾನ್ಸರ್ ಕಾಯಿಲೆ ಇರುವುದು ಧೃಡಪಟ್ಟಿದೆ ಮತ್ತು ಅದಕ್ಕೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಶೂಶ್ರೂಷೆಯನ್ನು ನೀಡಲಾಗುವುದು ಎಂದೂ ಹೇಳಾಲಾಗಿದೆ. ಈ ಸುದ್ದು ಆಘಾತಕಾರಿಕಾರಿಯಾಗಿ ಹೊರಬಿದ್ದಿದೆ.
ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಪ್ರಖ್ಯಾತ ರಾಜಮನೆತೆನಾದ ವ್ಯಕ್ತಿಯೊಬ್ಬರು ಈ ರೀತಿಯ ಆರೋಗ್ಯ ಪರಿಸ್ಥಿತಿಗೆ ಒಳಗಾಗಿರುವುದು ಸುದ್ದಿಯಾಗಿದೆ. ರಾಜನಿಗೆ ಕ್ಯಾನ್ಸರ್ ಇದೆ ಎಂದು ಹೇಳಲಾಗಿದ್ದರೂ ಅದು ಯಾವ ಭಾಗದಲ್ಲಿ ಮತ್ತು ಯಾವ ರೀತಿಯ ಕ್ಯಾನ್ಸರ್ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿಲ್ಲ. ಈಗ ಒಂದು ವರ್ಷದ ಹಿಂದೆಯಷ್ಟೇ ಚಾರ್ಲ್ಸ್ ಅವರ ಪಟ್ಟಾಭಿಷೇಕ ನಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.