ಬೆಂಗಳೂರು, ಮಾ.26- ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ (JDS) ತತ್ವ, ಸಿದ್ಧಾಂತ ಬದ್ಧತೆಗೆ ಧಕ್ಕೆಯಾಗದ ರೀತಿಯಲ್ಲಿ ಮೈತ್ರಿಧರ್ಮ ಪಾಲನೆ ಮಾಡುವ ಮೂಲಕ ಪ್ರಚಾರ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರದ ಜೆಡಿಎಸ್ ಉಸ್ತುವಾರಿ ನಾಯಕರು, ಸಹ ನಾಯಕರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಸಲಹಾ ರೂಪದ ಮಾರ್ಗಸೂಚಿ
ಪತ್ರವನ್ನು ಬರೆದಿದ್ದಾರೆ.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿ ಸಲಿದ್ದಾರೆ.ಇದನ್ನು ಅರಿತು ಚುನಾವಣೆಯಲ್ಲಿ ಎರಡೂ ಪಕ್ಷಗಳು ರಾಷ್ಟ್ರೀಯ ಬದ್ಧತೆ ಮತ್ತು ಸುರಕ್ಷತೆಗಾಗಿ ಪರಸ್ಪರ ಬೆಂಬಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರಚಾರ ಸಭೆಯಲ್ಲಿ ಎರಡೂ ಪಕ್ಷಗಳು ತಮ್ಮ ಪಕ್ಷದ ಚಿಹ್ನೆಗಳನ್ನು ಸಮ ಅಳತೆಯಲ್ಲಿ ಬಳಸಬೇಕು. ಸಾರ್ವಜನಿಕ ಸಭೆಗಳಲ್ಲಿ ಎರಡೂ ಪಕ್ಷಗಳ ಬಾವುಟವನ್ನು ಪ್ರದರ್ಶಿ ಬೇಕು. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಭಾವಚಿತ್ರವನ್ನು ಭೇದ ವಿಲ್ಲದೆ ಉಪಯೋಗಿಸಬೇಕು ಎಂಬ ಸಲಹೆಯನ್ನು ಅವರು ಪತ್ರದಲ್ಲಿ ಮಾಡಿದ್ದಾರೆ.
ಸಭೆಗಳಲ್ಲಿ ಎರಡೂ ಪಕ್ಷಗಳ ಕಾರ್ಯ ಕರ್ತರು ತಮ್ಮತಮ್ಮ ಪಕ್ಷದ ಸಾಲುಗಳನ್ನು ಕಡ್ಡಾಯವಾಗಿ ಬಳಸಬೇಕು. ರಾಷ್ಟ್ರ ಮತ್ತು ರಾಜ್ಯಮಟ್ಟದ ಉಭಯ ಪಕ್ಷಗಳ ನಾಯಕರ ಸಾಧನೆಗಳನ್ನು ಬಳಸಿಕೊಳ್ಳಬೇಕು. ಮತದಾರರ ಮನವೊಲಿಸಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಪ್ರಯತ್ನಿಸಬೇಕು. ಒಂದು ವೇಳೆ ಪ್ರಚಾರ ಸಭೆಗಳಲ್ಲಿ ಗೊಂದಲ ಅಥವಾ ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಗೆ ತಂದು ಪರಿಹರಿಸಿಕೊಳ್ಳಬೇಕು. ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.


5 ಪ್ರತಿಕ್ರಿಯೆಗಳು
Synchronize with the rhythm of rewarding spins. In crowns coins, rhythmic rewards keep you engaged. Spin in sync and win in harmony!
Sweet Bonanza delivers non-stop excitement with tumbling reels and heart-pounding bonuses. Land sweet bonanza volatility scatters for free spins packed with up to 100x multipliers. Spin and win big!
chumba casino no deposit bonus brings Vegas vibes straight to your phone. Claim free Sweeps Coins on signup and chase real cash redemptions. Fun never felt this rewarding!
Millions of bets every day. Thousands stake originals of winners every week. You’re next.
Your casino adventure starts at kings maxxwins. Play $5 and receive 500 Cash Eruption spins + up to $1K back in credits on day one. Discover exclusive games and endless thrills!