ಬೆಂಗಳೂರು,ಡಿ.2-ರಾಜ್ಯದಲ್ಲಿ ಅರಣ್ಯ ಪ್ರದೇಶ ವಿಸ್ತಾರಗೊಳ್ಳುತ್ತಿರುವ ಸಮಾಧಾನಕರ ಸಂಗತಿಯ ಬೆನ್ನಲ್ಲೇ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ನಗರ ಪಟ್ಟಣಗಳಲ್ಲಿ ಚಿರತೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿ ಭಯಭೀತಿ ಉಂಟಾಗಿದೆ.
ಚಿರತೆ ಹಾವಳಿಯನೀಡಲಾಗಿದೆ.ಟ್ಟಲು ಅರಣ್ಯ ಇಲಾಖೆ ನಡೆಸುತ್ತಿರುವ ಪ್ರಯತ್ನ ವ್ಯರ್ಥವಾಗುತ್ತಿದ್ದು ಒಂದು ಬೋನಿಟ್ಟು ಕಾದು ಚಿರತೆಯನ್ನು ಸೆರೆಹಿಡಿದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಕಡೆ ಚಿರತೆತ ಕಾಟ ಆರಂಭಗೊಳ್ಳುತ್ತಿದೆ.
ಮೈಸೂರಿನ ಬೃಂದಾವನ ಬಳಿ ಚಿರತೆ ಕಾಣಿಸಿಕೊಂಡು ಸತತ ಒಂದು ತಿಂಗಳ ಕಾಲ
ಸಾರ್ವಜನಿಕರಿಗೆ ನಿಷೇಧ ವಿಧಿಸಿ ಬೋನಿಟ್ಟು ಕಾದರೂ ಚಿರತೆ ಕಣ್ಣಾಮುಚ್ಚಾಲೆ ಆಡಿ ಅರಣ್ಯ ಇಲಾಖೆಯವರನ್ನು ಯಾಮಾರಿಸಿದೆ.
ಕಂಡಲ್ಲಿ ಗುಂಡು:
ಈ ನಡುವೆ ಮೈಸೂರಿನ ಟಿ ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿಯಾದ ಬೆನ್ನಲ್ಲೇ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆಯ ಸೂಚನೆ ನೀಡಿದೆ.
ಕಳೆದ ಕೆಲ ತಿಂಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಇದೀಗ ಎರಡನೇ ಬಲಿ ಪಡೆದಿದೆ. ನಿನ್ನೆ ಸಂಜೆ ಟಿ.ನರಸೀಪುರ ತಾಲೂಕಿನಲ್ಲಿ ಕಾಲೇಜು ಯುವತಿ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಕಳೆದ ತಿಂಗಳು ಯುವಕನೋರ್ವನನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಹಾಗಾಗಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಅರಣ್ಯ ಇಲಾಖೆ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಸೂಚಿಸಿದೆ.
ಚಿರತೆ ಸೆರೆಗೆ ಹರಸಾಹಸ:
ಚಿರತೆ ಕಂಡು ಬಂದಲ್ಲಿ ಗುಂಡು ಹಾರಿಸಲು ಡಿಸಿಎಫ್ ಕಮಲ ಕರಿಕಾಲನ್ ಸೂಚನೆ ಹೊರಡಿಸಿದ್ದಾರೆ. ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಸಾಶನ. ಕುಟುಂಬದ ಒಬ್ಬ ಸದಸ್ಯರಿಗೆ ಹೊರ ಗುತ್ತಿಗೆ ಆಧಾರದಡಿ ಕೆಲಸ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ ಟಿ. ನರಸೀಪುರ ಎಫ್‍ಆರ್‌ಓಗೆ ಕಡ್ಡಾಯ ರಜೆ ನೀಡಿ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಕೆಂಗೇರಿ ಜನತೆಗೆ ಆತಂಕ:
ನಗರದ ತುರಹಳ್ಳಿ ಬಳಿ ಜಿಂಕೆಯನ್ನ ಬೇಟೆಯಾಡಿರುವ ಚಿರತೆಯ ವಿಡಿಯೋ ವೈರಲ್ ಆದ ನಂತರ ಜನರು ಭಯಭೀತರಾಗಿದ್ದಾರೆ.
ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ತುರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶವಿದ್ದು, ಸೋಂಪುರ, ಶ್ರೀನಿವಾಸಪುರ, ಆರ್.ಆರ್.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿಯನ್ನ ಸುತ್ತುವರಿದಿದೆ. ಈ ಅರಣ್ಯ ಪ್ರದೇಶವು 514.26 ಎರಕೆ ವಿಸ್ತೀರ್ಣದಲ್ಲಿದೆ. ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಇಂದು ಸಹ ಚೀತಾ ಕೂಂಬಿಂಗ್ ಮುಂದುವರೆಯಲಿದೆ.
ಒಂಟಿ ಓಡಾಡದಂತೆ ಸೂಚನೆ:
ಎರಡು ತಂಡಗಳಿಂದ ಚಿರತೆಯ ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು ಒಬ್ಬೊಬ್ಬರೇ ಓಡಾಡದಂತೆ ಸೂಚನೆ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಈ ಭೀತಿಯ ನಡುವೆಯೂ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿಲ್ಲ. ಅಂಗಡಿ ಮಾಲೀಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ತುರಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿದ ರಸ್ತೆಯತ್ತ ಜನರ ಸಂಚಾರ ಸ್ಥಗಿತಗೊಂಡಿದೆ. ಇಡೀ ರಸ್ತೆ ಸಂಪೂರ್ಣ ಖಾಲಿಯಾಗಿದೆ.
ಮುಂಜಾನೆ ವಾಕಿಂಗ್ ಬರುತ್ತಿದ್ದವರೆಲ್ಲಾ ತಡವಾಗಿ ರಸ್ತೆಗೆ ಇಳಿದಿದ್ದಾರೆ. ಇನ್ನೊಂದೆಡೆ ತುರಹಳ್ಳಿ ಪ್ರದೇಶ ಸುತ್ತಲೂ ಸಾಕಷ್ಟು ಬಡವಾಣೆಗಳಿದ್ದು, ಜನವಸತಿ ಪ್ರದೇಶವಾಗಿದೆ. ಇಲ್ಲಿಗೆ ಚಿರತೆ ನುಗ್ಗದಂತೆ ಎಚ್ಚರವಹಿಸುವುದು ಅವಶ್ಯಕವಾಗಿದೆ. ಸಾಧ್ಯವಾದಷ್ಟು ಬೇಗ ಚಿರತೆ ಸೆರೆಹಿಡಿದು ಕಾಡಿಗೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ತುರಹಳ್ಳಿ ಅರಣ್ಯದೊಳಗೆ ವಾಕಿಂಗ್ ಮಾಡದಂತೆ ಸೂಚನೆ ನೀಡಲಾಗಿದೆ.