ಭಾರತದ ಖಾಸಗಿ ವಿಮಾನಯಾನ ಕಂಪನಿಗಳ ಪೈಕಿ ಆಗ್ರ ಸ್ಥಾನದಲ್ಲಿದ್ದ ಜೆಟ್ ಏರ್ವೇಸ್ (Jet Airways) ಕಂಪನಿ ಸ್ಥಗಿತವಾಗಿ ಅನೇಕ ವರ್ಷಗಳು ಕಳೆದು ಅದನ್ನು ಪುನಶ್ಚೇತನ ಗೊಳಿಸುವ ಪ್ರಯತ್ನಗಳೂ ವಿಫಲವಾಗಿವೆ. ಇದರ ಮಧ್ಯೆ ಆ ಸಂಸ್ಥೆಯ ಮಾಲೀಕ ನರೇಶ್ ಗೋಯಲ್ ಅವರು ವೈಯಕ್ತಿಕವಾಗಿ ಕೂಡ ಅನೇಕ ಆರೋಪಗಳಿಗೆ ಗುರಿಯಾಗಿ ಕೋರ್ಟ್ ಗಳಿಗೆ ಎಳೆಯಲ್ಪಟ್ಟಿದ್ದಾರೆ. ನರೇಶ್ ಗೋಯಲ್ ವಿರುದ್ಧ ಕೆನರಾ ಬ್ಯಾಂಕ್ ಸುಮಾರು 538 ಕೋಟಿ ರೂಪಾಯಿ ಮೋಸ ಮಾಡಿರುವ ದಾವೆ ಹೂಡಿತ್ತು. ಆ ಪ್ರಕರಣದ ವಿಚಾರವಾಗಿ ಕೋರ್ಟ್ ನಲ್ಲಿ ಕಾಣಿಸಿಕೊಂಡ ನರೇಶ್ ಗೋಯಲ್ ಅವರು ‘ನನಗೆ ಇನ್ನೇನೂ ಆಶಾಭಾವನೆ ಉಳಿದಿಲ್ಲ. ನನ್ನನ್ನು ಜೈಲಿಗೆ ಹಾಕಿ ಅಲ್ಲೇ ಸಾಯಲು ಅವಕಾಶ ಮಾಡಿ ಕೊಡಿ’ ಎಂದು ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟಿದ್ದಾರೆ.
ವ್ಯಾಪಾರ ಸೇರಿ ಅನೇಕ ರೀತಿಗಳಲ್ಲಿ ನಷ್ಟ ಮತ್ತು ನೋವನ್ನು ಅನುಭವಿಸಿರುವ ಗೋಯಲ್ ಅವರು ತಮ್ಮ ಪತ್ನಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಾರಣದಿಂದಾಗಿ ಇನ್ನೂ ಜರ್ಜರಿತರಾಗಿದ್ದರೆ. ಅವರನ್ನು ED ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಂಧಿಸಿತ್ತು. ಭಾರತ ಕಂಡ ಪ್ರಮುಖ ಉದ್ಯಮಪತಿಗಳ ಪೈಕಿ ವಿಮಾನಯಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿ ಜೆಟ್ ಏರ್ವೇಸ್ (Jet Airways) ಮೂಲಕ ದೇಶಕ್ಕೆ ಒಂದು ಉತ್ತಮ ವಿಮಾನಯಾನ ಕಂಪನಿಯನ್ನು ನೀಡಿದ್ದ ಗೋಯಲ್ ಅವರು ಈ ರೀತಿಯಲ್ಲಿ ಕಂಡುಬಂದಿದ್ದು ಅನೇಕರಲ್ಲಿ ತಲ್ಲಣ ಮೂಡಿಸಿದೆ.
ALSO READ | Latest Kannada News | News in Kannada
ರಶ್ಮಿಕಾ ಡೀಪ್ ಪೇಕ್ ವಿಡಿಯೋ ರಿಲೀಸ್ ಮಾಡಿದವರು ಅರೆಸ್ಟ್ | Deepfakes