ಮೈಸೂರು,ಜೂ.22- ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಕೊಲೆಗೈದು ಶವವನ್ನು ಹೂತಿಟ್ಟು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ತಿ.ನರಸೀಪುರ ತಾಲ್ಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.
ಟಿ. ನರಸೀಪುರ ತಾಲ್ಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ಸಿದ್ದರಾಜು ಹಾಗು ಸುಮಿತ್ರಾ ಮೃತಪಟ್ಟವರು. ಸಿದ್ದರಾಜು ನೇಣು ಬಿಗಿದುಕೊಂಡಿರುವ ಸ್ಥಳದಲ್ಲೇ ಸುಮಿತ್ರಾಳ ಶವವನ್ನು ಸಿದ್ದರಾಜು ಹೂತಿಟ್ಟಿದ್ದಾನೆ.
ಕೆಲ ವರ್ಷಗಳಿಂದ ಸುಮಿತ್ರಾ ಮತ್ತು ಸಿದ್ದರಾಜು ಅಕ್ರಮ ಸಂಬಂಧ ಹೊಂದಿದ್ದರು. ಕಳೆದ ಶನಿವಾರ ಸಿದ್ದರಾಜು, ಸುಮಿತ್ರಾ ಜೊತೆ ತಲಕಾಡಿಗೆ ತೆರಳಿದ್ದರು. ಈ ವೇಳೆ ಸಿದ್ದರಾಜು ಸುಮಿತ್ರಾ ಶವ ಹೂತಿಟ್ಟು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ತಲಕಾಡು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.