ಬೆಂಗಳೂರು,
ದೇಶ ವಿದೇಶಗಳ ಆಗುಹೋಗುಗಳ ಕುರಿತಂತೆ ಏಳುಕೋಟಿ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ.ಜನ ಪ್ರಸಿದ್ಧ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ನಡೆಯುತ್ತದೆ.
ಈ ಜಾತ್ರೆಯ ಆಕರ್ಷಣೆಯೇ ಕಾರ್ತೀಕ ಭವಿಷ್ಯವಾಣಿ ಇದನ್ನು ಕೇಳಲು ರಾಜ್ಯದ ಹಲವು ಜಿಲ್ಲೆಗಳು ಮಾತ್ರವಲ್ಲ ಹೊರ ರಾಜ್ಯದಿಂದಲೇ ಭಕ್ತರು ಆಗಮಿಸುತ್ತಾರೆ. ಈ ವರ್ಷ ಲಕ್ಷಾಂತರ ಭಕ್ತರ ಉಘೇ ಉಘೇ ಘೋಷಣೆಗಳ ನಡುವೆ, ಆಕಾಶಕ್ಕೆ ಮುಖ ಮಾಡಿ 14 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪನವರು ಸಂಪಾಯಿತಲೇ ಪರಾಕ್ ಎಂದು ದೈವವಾಣಿ ನುಡಿದಿದ್ದಾರೆ.
ಎಣ್ಣೆಯಿಂದ ತೋಯ್ದಿದ್ದ ಬಿಲ್ಲನ್ನು ಸರಸರನೆ ಏರಿದ ಗೊರವಯ್ಯ ಸದ್ದಲೇ ಎನ್ನುತ್ತಲೇ ಸುಮ್ಮನಾದ ಭಕ್ತರು ಎರಡು ಪದದ ಕಾರ್ಣಿಕ ನುಡಿ ಕೇಳಿ ಪುಳಕಿತರಾಗಿದ್ದಾರೆ.
ಈ ಬಾರಿಯ ಕಾರ್ಣಿಕ ನುಡಿಯನ್ನು ಭಕ್ತರು, ಗ್ರಾಮಸ್ಥರು ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. “ಸಂಪಾಯಿತಲೇ ಪರಾಕ್ ” ಎಂದರೇ ಮಳೆ ಬೆಳೆ ನಾಡು ಸಮೃದ್ದಿ ಆಗುತ್ತೆ ಎಂದಿದ್ದಾರೆ. ಭಕ್ತರು ಮತ್ತು ಜಾನಪದ ತಜ್ಞರು ಶುಭ ಅರ್ಥವನ್ನೇ ಕಲ್ಪಿಸುತ್ತಿದ್ದಾರೆ. ಸಂಪತ್ತು + ಆಯಿತಲೇ ಎಂದರೆ, ನಾಡಿನಲ್ಲಿ ಮಳೆ, ಬೆಳೆ ಸಮೃದ್ಧವಾಗಿ ಸಂಪತ್ತು ವೃದ್ಧಿಯಾಗಲಿದೆ. ರೈತರು ಪಟ್ಟ ಶ್ರಮಕ್ಕೆ ಫಲ ಸಿಗಲಿದೆ ಎಂದರ್ಥ.
ಕೊನೆಯ ತಾಲೆ ಅಥವಾ ತಲೆ ಎಂಬ ಪದವನ್ನು ತಳಮಟ್ಟದ ಜನರಿಗೂ ಅಥವಾ ಪ್ರತಿಯೊಬ್ಬರಿಗೂ ತಲುಪುವ ಅರ್ಥದಲ್ಲಿ ನೋಡಲಾಗುತ್ತಿದೆ. ಅಂದರೆ ರಾಜ್ಯದ ಜನತೆಗೆ ಸುಖ-ಶಾಂತಿ ಮತ್ತು ಸಮೃದ್ಧಿ ಸಿಗಲಿದೆ, ಯಾವುದೇ ದೊಡ್ಡ ಕಂಟಕಗಳಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅರ್ಥವಾಗಿದೆ ಎಂಬ ವಿಶ್ಲೇಷಣೆ ಮೈಲಾರನ ಭಕ್ತರಿಂದ ಬರುತ್ತಿದೆ.
Previous Articleಕನಕೋತ್ಸವದಲ್ಲಿ ಶಿವಕುಮಾರ್ ಕೊಟ್ಟ ಸಂದೇಶ ಗೊತ್ತಾ..?
Next Article ಮೆಟ್ರೋ ಪ್ರಯಾಣ ದರ ಇನ್ನಷ್ಟು ದುಬಾರಿ


3 ಪ್ರತಿಕ್ರಿಯೆಗಳು
Betano levererar https://betanogame.org/sv/ den ultimata ruset. Nya spelare får 100% upp till €500 plus free spins. Snurra Megaways-slots eller satsa live på dina favoritlag. Gå med nu.
Betano: play anywhere, win everywhere, cash out smiling. https://tikitakagm.org/el/promo-code/ Ready for serious action? Betano is waiting with open arms (and bonuses).
550 AZN-Й™ qЙ™dЙ™r bonus paketi sЙ™ni Mostbet-dЙ™ gГ¶zlЙ™yir – Android tЙ™tbiq , Qeydiyyat 1 dЙ™qiqЙ™, uduЕџlar isЙ™ sonsuz — Mostbet .