ಹೊಸಪೇಟೆ(ವಿಜಯನಗರ): ನಟ ಪುನೀತ್ ರಾಜ್‌ಕುಮಾರ್ ಸವಿನೆನಪಿಗಾಗಿ ಹೊಸಪೇಟೆಯಲ್ಲಿ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ. ಭಾನುವಾರದಂದು ಅದ್ಧೂರಿಯಾಗಿ ಪುತ್ಥಳಿ ಅನಾವರಣ ಕಾರ್ಯ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಪಾರ ಅಭಿಮಾನಿಗಳು ಸೇರಿದಂತೆ ರಾಘವೇಂದ್ರ ರಾಜ್‌ಕುಮಾರ್ ಹಾಗು ಪತ್ನಿ ಮಂಗಳಾ ಭಾಗಿಯಾಗಿದ್ದರು. ಈ ವೇಳೆ ಮಂಗಳಾ ಅಪ್ಪುವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.
ಇದೇ ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿಗಳು ಕುರ್ಚಿಗಾಗಿ ಹೊಡೆದಾಡಿಕೊಂಡ ಘಟನೆಯೂ ನಡೆದಿದೆ. ಕುರ್ಚಿ ಸಿಗಲಿಲ್ಲ ಎಂಬ ಕಾರಣಕ್ಕೆ ಕೈ ಕೈ ಮಿಲಾಯಿಸಿ ಮಾರಾಮಾರಿ ನಡೆಸಿದ್ದಾರೆ.