ಮಂಗಳೂರು,ಅ.25- ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಬಳಿ ಎರಡು ಗುಂಪಿನ ಯುವಕರು ತಲ್ವಾರ್ನಿಂದ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಗಂಭೀರ ಗಾಯಗೊಂಡಿದ್ದು,ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ದಾಳಿ ನಡೆದಿದೆ. ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ದಾಳಿ ಮಾಡಿದ ಆರೋಪಿಗಳಾಗಿದ್ದಾರೆ.
ತಸ್ಲೀಮ್ ಹಾಗೂ ಆತನ ಸ್ನೇಹಿತರು ಮಾತನಾಡುತ್ತ ನಿಂತಿದ್ದರು. ಈ ತಸ್ಲೀಮ್ಗೆ ಕರೆಯೊಂದು ಬಂದಿತ್ತು. ಫೋನ್ನಲ್ಲಿ ತಸ್ಲೀಮ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಹೇಳಿದ್ದಾರೆ.
ಇದರಿಂದ ಕೋಪಗೊಂಡ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲೆ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲ್ವಾರ್ನಿಂದ ದಾಳಿ ಮಾಡಿದ್ದಾರೆ. ತಸ್ಲೀಮ್ ಬಲಗಾಲು, ಬಲಗೈಗೆ ಗಾಯಗವಾಗಿದೆ. ಇದೇ ವೇಳೆ ಮಹಮ್ಮದ್ ಶಾಕೀರ್ಗೂ ತಲವಾರಿನಿಂದ ಹಲ್ಲೆ ಮಾಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ತಲವಾರಿನಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
Previous Article2 ತಿಂಗಳಲ್ಲಿ ಬೆಂಗಳೂರಿನ ಬಸ್ ಕಂಡಕ್ಟರ್ ಮೇಲೆ ಹಲ್ಲೆಯ 3 ಪ್ರಕರಣ ದಾಖಲು
Next Article ಮುಡಾ ಅಧಿಕಾರಿಗಳಿಗೆ ED ಸಮನ್ಸ್ .


1 ಟಿಪ್ಪಣಿ
This place was coded for your comeback story – https://atamsulosin.com/mostbet-casino-bonus-2026-recenzia-250-free-spins/ , The night you remember forever starts right now .