ಬೆಂಗಳೂರು,ಜೂ.26- ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಆರೋಪದ ಮೇರೆಗೆ ರಿಯಲ್ ಎಸ್ಟೇಟ್ ಕಂಪನಿ ಮಂತ್ರಿ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ್ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯದ ಅದಿಕಾರಿಗಳು (ಇಡಿ) ತೀವ್ರ ವಿಚಾರಣೆ ನಡೆಸಿದ್ದಾರೆ..
ಸಾವಿರಾರು ಮಂದಿಗೆ ಫ್ಲಾಟ್ ನೀಡುವ ಆಶ್ವಾಸನೆ ನೀಡಿ ಕೋಟ್ಯಂತರ ರೂ. ಪಡೆದು ಅದನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಸುಶೀಲ್ ಪಾಂಡುರಂಗ್ ಮಂತ್ರಿ 1,200 ಕುಟುಂಬಗಳಿಗೆ ಫ್ಲಾಟ್ ನೀಡುವ ಆಶ್ವಾಸನೆ ನೀಡಿ, ಬರೋಬ್ಬರಿ 1,356 ಕೋಟಿ ರೂ. ವಂಚನೆ ಮಾಡಿದ್ದಾರೆ. ಹಣ ಕೇಳಲು ಹೋದವರಿಗೆ ಕೆಟ್ಟದಾಗಿ ಬೈಯ್ದು ಹೊರಗೆ ಕಳುಹಿಸಿದ ಬಗ್ಗೆ ವಿಚಾರಣೆ ನಡೆಸಲಾಗಿದೆ.
ಫೋಜಿ ಸ್ಕೀಂ ಅಂತ ಹಣವನ್ನು ವಾಪಸ್ ಕೊಡಲು ಆಫರ್ ನೀಡಿದ್ದ ಸುಶೀಲ್ ಪಾಂಡುರಂಗ್, ಜನರಿಗೆ ಮನೆಯ ನಕಲಿ ಫೋಟೋಗಳನ್ನು ತೋರಿಸಿ ವಂಚನೆ ಮಾಡಿದ್ದಾನೆ. ಏಳರಿಂದ ಹತ್ತು ವರ್ಷಗಳ ಹಿಂದೆಯೇ ಹಣ ಕಟ್ಟಿದ್ದರೂ ಕೂಡ ಹಲವಾರು ಮಂದಿಗೆಇದೂವರೆಗೂ ಮನೆ ನೀಡಿಯೇ ಇಲ್ಲ. ಹೂಡಿಕೆದಾರರ ಹಣವನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ ಮಾಡಿದ್ದಾರೆ.
ಫೋಜಿ ಸ್ಕೀಂ ಅಂತೆಯೇ ಬೈ ಬ್ಯಾಕ್ ಅಡಿಯಲ್ಲಿ ಅಕ್ರಮ ಎಸಗಿದ್ದಾರೆ. ಅಲ್ಲಿ-ಇಲ್ಲಿ ಬೇರೊಂದು ಅಸ್ತಿ ಖರೀದಿ ಮಾಡಿರುವುದು ಸ್ಪಷ್ಟವಾಗಿದೆ. 5 ಸಾವಿರ ಕೋಟಿಯಲ್ಲಿ 1ಸಾವಿರ ಕೋಟಿಗೆ ಲೆಕ್ಕವೇ ಇಲ್ಲ. ಹವಾಲ ಹಣದ ವರ್ಗಾವಣೆ ಬಗ್ಗೆ ಮುಂದೆ ತನಿಖೆ ಆಗಬೇಕಿದೆ. ಸುಶೀಲ್ ಪಾಂಡುರಂಗ್ರನ್ನು ವಿಚಾರಣೆಗೆ ಒಳಪಡಿಸಿದಾಗ ಯಾವುದೇ ರೀತಿಯ ಸ್ಪಷ್ಟ ಉತ್ತರ ನೀಡಿಲ್ಲ. ಬೆಂಗಳೂರು ಆಳುವ ಹುಚ್ಚಿನಲ್ಲಿದ್ದ ಸುಶೀಲ್ ಮಂತ್ರಿ ಇದೀಗ ಇಡಿ ವಶದಲ್ಲಿದ್ದಾನೆ.
Previous Articleಸಿಎಂ ಯೋಗಿ ಹೆಲಿಕಾಪ್ಟರ್‌ಗೆ ಹಕ್ಕಿ ಡಿಕ್ಕಿ: ತುರ್ತು ಭೂಸ್ಪರ್ಶ
Next Article ಚಿಕನ್ ಪೀಸ್ ಗಾಗಿ Fight.. !!