ಬೆಂಗಳೂರು.
ವರ್ಷಾಂತ್ಯದಲ್ಲಿ ಕನ್ನಡ ಸಿನಿಮಾ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಕಾಂತಾರಾ ಸೇರಿದಂತೆ ಬೆರಳೆಣಿಕೆಯ ಕೆಲವು ಸಿನಿಮಾ ಹೊರತುಪಡಿಸಿ ಈ ವರ್ಷ ಬಿಡುಗಡೆಯಾದ ಕನ್ನಡದ ಅನೇಕ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಾವುದೇ ರೀತಿಯ ಸದ್ದು ಮಾಡಲಿಲ್ಲ ಆದರೆ ಇದೀಗಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಕನ್ನಡಧ ಬ್ಲಾಕ್ ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಕ್ರಿಸ್‌ಮಸ್ ದಿನದಂದು ಬಿಡುಗಡೆಯಾದ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಾರ್ಕ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ ಎಂದು ಸಿನಿಮಾದ ನಿರ್ಮಾಪಕರು ಹೇಳಿದ್ದಾರೆ
ಮಾರ್ಕ್ ಸಿನಿಮಾ ಮೊದಲ ವಾರಾಂತ್ಯದಲ್ಲಿಯೇ 35 ಕೋಟಿ ರೂಪಾಯಿ ಗಳಿಸಿದೆ. ವಾರಾಂತ್ಯ ಮಾತ್ರವಲ್ಲದೆ ಸೋಮವಾರವೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು, ದಾವಣಗೆರೆ ಮತ್ತು ಚಾಮರಾಜನಗರದ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಾಲ್ಕನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಂಡಿವೆ.
ಕಿಚ್ಚನ ಸ್ವಾಗ್, ಸ್ಟೈಲು, ಆಟಿಟ್ಯೂಡ್ ಕಂಡು ಸಿನಿ ರಸಿಕರು ಫಿದಾ ಆಗಿದ್ದಾರೆ. ಮ್ಯಾಕ್ಸ್ ಬಳಿಕ ಮತ್ತೊಮ್ಮೆ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಬೆಳ್ಳಿಪರದೆ ಮೇಲೆ ಮೋಡಿ ಮಾಡಿದೆ.
Previous Articleಡ್ರಗ್ಸ್ ದಂಧೆ – ಪೊಲೀಸರೇ ಎಚ್ಚರ!
Next Article ಸಾವಿರದ ಸಂಭ್ರಮಕ್ಕೆ ಸಿದ್ದರಾಮಯ್ಯ ತಯಾರಿ!

