ಬೆಂಗಳೂರು, ಜ.25-
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ, CID ಮುಖ್ಯಸ್ಥ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ವಿ. ಶರತ್ ಚಂದ್ರ ಅವರನ್ನು ‘ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕ’ ಹಾಗೂ ಗುಪ್ತದಳ ಹೆಚ್ಚುವರಿ ನಿರ್ದೇಶಕ ಲಾಭುರಾಮ್ ಅವರನ್ನು ‘ರಾಷ್ಟ್ರಪತಿ ಅವರ ಶ್ಲಾಘನೀಯ ಸೇವಾ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಅಸಾಧಾರಣ ಹಾಗೂ ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸೇವಾ ಪದಕ ನೀಡಿ ಗೌರವಿಸುವುದು ಸಂಪ್ರದಾಯ. ಅದರಂತೆ ಈ ಬಾರಿ ರಾಜ್ಯದ 20 ಮಂದಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪದಕ ಲಭಿಸಿದೆ.
ರಾಷ್ಟ್ರಪತಿ ಅವರ ವಿಶಿಷ್ಟ ಸೇವಾ ಪದಕಕ್ಕೆ CID, ADGP, ಕೆ.ವಿ. ಶರತ್ ಚಂದ್ರ ಅವರು ಭಾಜನರಾಗಿದ್ದಾರೆ. ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್, ಪೊಲೀಸ್ ಪ್ರಧಾನ ಕಚೇರಿಯ DYSP ಎಸ್. ನಾಗರಾಜು, ಕರ್ನಾಟಕ ಭೂ ಸೇನಾ ನಿಗಮದ DYSP ಗಳಾದ ವೀರೇಂದ್ರ ಕುಮಾರ್, ಪ್ರಮೋದ್ ಕುಮಾರ್, ಕಲ್ಬುರ್ಗಿ ಕರ್ನಾಟಕ ಲೋಕಾಯುಕ್ತ DYSP ಸಿದ್ದಲಿಂಗಪ್ಪ ಗೌಡ, ಆರ್. ಪಾಟೀಲ್, ಅಕ್ರಮ ಒತ್ತುವರಿ ತೆರವು ಕಾರ್ಯಪಡೆಯ DYSP ಸಿ.ವಿ. ದೀಪಕ್, ನಗರ ವಿಶೇಷ ವಿಭಾಗದ DYSP ವಿಜಯ್ ಹೆಚ್., ಮಾದನಾಯಕನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್, ಅಶೋಕ ನಗರ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಗಣೇಶ್ ಜನಾರ್ಧನ್, ದಾವಣಗೆರೆ ವೃತ್ತ ನಿರೀಕ್ಷಕ ಆರ್.ಪಿ. ಅನಿಲ್, ಸಂಚಾರ ಮತ್ತು ಯೋಜನೆ ಇನ್ಸ್‌ಪೆಕ್ಟರ್ ಮನೋಜ್ ಎನ್. ಹೋವಳೆ, ಕೆ.ಎಸ್.ಆರ್. ಪಿ. 3ನೇ ಪಡೆಯ ವರದರಾಜು, ಕೆ.ಎಸ್.ಆರ್. ಪಿ. 4ನೇ ಪಡೆಯ ನಾರಾಯಣರಾವ್, ವೆಂಕಟರಮಣ ಗೌಡ, 9ನೇ ಪಡೆಯ ಪಾಟೀಲ್, CID ಯ ಹೆಡ್‍ಕಾನ್ಸ್ ಟೇಬಲ್ ಪ್ರಸನ್ನಕುಮಾರ್, ತುಮಕೂರು ಜಿಲ್ಲೆ ಸಂಚಾರಿ ಪೊಲೀಸ್ ಠಾಣೆಯ ಸಿಹೆಚ್‍ಸಿ ಪ್ರಭಾಕರ್, SCRB ಮಹಿಳಾ ಹೆಡ್‍ಕಾನ್ಸ್ ಟೇಬಲ್ ಸುಧಾ ಮತ್ತು ಸಿಟಿ ಕಂಟ್ರೋಲ್ ರೂಂನ ಸಿಹೆಚ್‍ಸಿ ರವಿಕುಮಾರ್ ಅವರುಗಳಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಲಭಿಸಿದೆ.