ಟರ್ಕಿ: ಕೊರೋನಾ ನಂತರ ಪ್ರತಿ ಮೂವರು ಶಾಲಾ ಮಕ್ಕಳಲ್ಲಿ ಒಬ್ಬರು ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್ಲೈನ್ ಪಾಠಗಳನ್ನು ಆಲಿಸಿದ ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.
ಕೋವಿಡ್ -19 ಬಗ್ಗೆ ಆತಂಕ, ಮೈಗ್ರೇನ್ ರೋಗ ಲಕ್ಷಣಗಳ ಉಲ್ಬಣ ಮತ್ತು ಮೈಗ್ರೇನ್ ತಲೆನೋವಿಗೆ ಹೊಸ ಕಾರಣಗಳು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಟರ್ಕಿಯ ಕರಮನ್‌ನಲ್ಲಿರುವ ಎರ್ಮೆನೆಕ್ ಸ್ಟೇಟ್ ಹಾಸ್ಪಿಟಲ್ನಲ್ಲಿ ಪ್ರಮುಖ ಸಂಶೋಧಕರಾದ ಐಸ್ ನೂರ್ ಓಜ್ಡಾಗ್ ಅಕಾರ್ಲೆ ಅವರ ನಿರ್ದೇಶನದಲ್ಲಿ ಈ ಅಧ್ಯಯನವನ್ನ ನಡೆಸಲಾಯಿತು. ಈ ಅಧ್ಯಯನವು 10 ರಿಂದ 18 ವರ್ಷದೊಳಗಿನ 851 ಮಕ್ಕಳನ್ನು ಪರೀಕ್ಷಿಸಿದೆ. ಅಧ್ಯಯನದ ಅವಧಿಯಲ್ಲಿ 756 ಜನರು ತಲೆನೋವಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
Previous Articleಅತ್ಯಾಚಾರ ಪ್ರಕರಣ: ನಟ-ನಿರ್ಮಾಪಕ ವಿಜಯ್‌ಬಾಬು ಅರೆಸ್ಟ್
Next Article ಖ್ಯಾತ ಮಲಯಾಳಿ ನಟ ಎನ್.ಡಿ.ಪ್ರಸಾದ್ ಇನ್ನಿಲ್ಲ!