ಬೆಂಗಳೂರು, ಜ.3 -ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಹೊಂಚು ಹಾಕಿ ಕೋಟ್ಯಾಂತರ ಮೌಲ್ಯದ ಬ್ರಾಂಡೆಡ್ ಶೂಗಳನ್ನು (Branded Shoe) ತುಂಬಿದ್ದ ಈಚರ್ ವಾಹನವನ್ನು ಸಿನಿಮೀಯ ಮಾದರಿಯಲ್ಲಿ ಕಳವು ಮಾಡಿದ್ದ ಮೂವರು ಖದೀಮರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಸುಭಾನ್ ಪಾಷಾ, ಮನ್ಸರ್ ಅಲಿ ಮತ್ತು ಶಹಿದ್ದುಲ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದು,ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಬಾಲದಂಡಿ ಅವರು ತಿಳಿಸಿದ್ದಾರೆ.
ಕಳೆದ ಡಿ. 21 ರಂದು ಆನೇಕಲ್ ನ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್ ವಾಹನ ಕಾಣೆಯಾಗಿತ್ತು. ಸುಮಾರು ಒಂದು ಕೋಟಿ ಹತ್ತು ಲಕ್ಷ ಮೌಲ್ಯದ 1,558 ಜೊತೆ ಶೂ ಸಹಿತ ಈಚರ್ ವಾಹನ ಕಳುವಾದ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ನಾಪತ್ತೆಯಾದ ಈಚರ್ ವಾಹನ ಚಾಲಕನ ಹಿನ್ನೆಲೆ ಪರಿಶೀಲನೆ ಮಾಡಿದ್ದಾರೆ. ಆತ ಈ ಹಿಂದೆ ದುಬಾರಿ ಬೆಲೆಯ ಬ್ರಾಂಡೆಡ್ ಬಟ್ಟೆಗಳನ್ನು ಇದೇ ರೀತಿ ವಾಹನ ಸಮೇತ ಕದ್ದು, ಜೈಲು ಸೇರಿದ್ದ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಶೂಗಳ ಜೊತೆ ಅಸ್ಸಾಂ ಮೂಲದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆನೇಕಲ್ ಗೋದಾಮಿನಿಂದ ಶೂಗಳನ್ನು ತುಂಬಿಕೊಂಡ ಹೊರಟ ವಾಹನವನ್ನು ಹೊಸಕೋಟೆ ಬದಲು ನಗರದ ರಜಾಕ್ ಪಾಳ್ಯಕ್ಕೆ ಕರೆದೊಯ್ದು ಅಲ್ಲಿನ ಮನೆಯೊಂದರಲ್ಲಿ ಅನ್ ಲೋಡ್ ಮಾಡಿದ ಈಚರ್ ವಾಹನವನ್ನು ಚಿಕ್ಕಜಾಲದ ಬಳಿ ಬಿಟ್ಟು ಪರಾರಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.

1 ಟಿಪ್ಪಣಿ
The night you remember forever starts right now – https://atamsulosin.com/mostbet-casino-bonus-2026-recenzia-250-free-spins/ , Fortune wrote you into the script as the final boss .