ಬೆಂಗಳೂರು, ಜೂ. 29-ಒಂಟಿಯಾಗಿ ನಡೆದುಕೊಂಡು ಹೋಗುವವರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕುಖ್ಯಾತ ಖದೀಮನೊಬ್ಬನನ್ನು ಬಂಧಿಸುವಲ್ಲಿ ಕಲಾಸಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೆಜೆನಗರದ ಸೈಯದ್ ಅಲಿಯಾಸ್ ಜುನೈದ್ (22) ಬಂಧಿತ ಆರೋಪಿಯಾಗಿದ್ದು ಆತನಿಂದ 1,45 ಲಕ್ಷ ಮೌಲ್ಯದ ವಿವಿಧ ಕಂಪನಿಯ 9 ಮೊಬೈಲ್ ಗಳನ್ನು ಹಾಗು ಕೃತ್ಯಕ್ಕೆ ಉಪಯೋಗಿಸಿದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಜೂ.27 ರಂದು ಬೆಳಿಗ್ಗೆ 11-30ರ ವೇಳೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಕಲಾಸಿಪಾಳ್ಯದ ಎಸ್ಆರ್ ಎಸ್ ಟ್ರಾವಲ್ಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ನ್ನು ದ್ವಿಚಕ್ರ ವಾಹನದಲ್ಲಿ ಬಂದು ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿದ ಕಲಾಸಿಪಾಳ್ಯ ಇನ್ಸ್‌ಪೆಕ್ಟರ್ ಚೇತನ್‍ಕುಮಾರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನದಿಂದ ಕಲಾಸಿಪಾಳ್ಯ, ವಿವಿ ಪುರಂ, ಬಸವನಗುಡಿ, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಬೈಲ್
ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದರು.
Previous Articleವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು..
Next Article ದೇಶದಲ್ಲಿ 14,506 ಜನರಿಗೆ ಕೊರೋನಾ ಸೋಂಕು, 30 ಮಂದಿ ಸಾವು