ಶಿವಮೊಗ್ಗ- ಕರ್ನಾಟಕದಲ್ಲಿ (Karnataka) ಪ್ರಧಾನಿ ಮೋದಿ ಮತ್ತು ಗುಜರಾತ್ ಮಾದರಿಯ ಚುನಾವಣೆ ಇಲ್ಲಿ ನಡೆಯಲು ಸಾಧ್ಯವಿಲ್ಲ ಇಲ್ಲಿನ ಬಿಜೆಪಿಯಲ್ಲಿ (BJP) ಸ್ವಚನ ಪಕ್ಷಪಾತ ಕುಟುಂಬ ರಾಜಕಾರಣ ಭ್ರಷ್ಟಾಚಾರವೇ ಪ್ರಮುಖವಾಗಿ ನಡೆಯುತ್ತದೆ. ಈ ರೀತಿಯ ಆರೋಪ ಮಾಡುವುದು ಪ್ರತಿಪಕ್ಷಗಳಲ್ಲ ಬದಲಿಗೆ ಬಿಜೆಪಿಯ ಹಿರಿಯ ನಾಯಕ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur Manjunath).
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ವರಿಷ್ಠರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಬಿಜೆಪಿಯಲ್ಲಿ ವಯಸ್ಸಿನ ಅಂತರವಿದೆ ಭ್ರಷ್ಟಾಚಾರ ವ್ಯಾಪಕವಾಗಿದೆ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆಹಾಗಾಗಿ ಗುಜರಾತ್ ಮಾದರಿಯ ಚುನಾವಣೆ ಇಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ದೇಶಕ್ಕಾಗಿ ತಮ್ಮ ಕುಟುಂಬವನ್ನು ಅಷ್ಟೇ ಅಲ್ಲ ತಮ್ಮ ತಾಯಿಯನ್ನೇ ಮರೆತರು ಇಡೀ ತಮ್ಮ ಬದುಕನ್ನ ದೇಶಕ್ಕಾಗಿ ಮುಡುಪಾಗಿಟ್ಟರು ಬಿಜೆಪಿಯನ್ನು ಸಮರ್ಥವಾಗಿ ಕಟ್ಟಿದರು ಇವರಂತಹ ರಾಜಕಾರಣ ಕರ್ನಾಟಕದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕರ್ನಾಟಕ ಬಿಜೆಪಿಯಲ್ಲಿ ವಯಸ್ಸಿನ ದೊಡ್ಡ ಅಂತರವಿದೆ ದುರಾಸೆ ತುಂಬಿದ ನಾಯಕರಿದ್ದಾರೆ ಕುಟುಂಬ ರಾಜಕಾರಣ ಮೇರೆ ಮೀರಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಗುಜರಾತ್ ನಲ್ಲಿ ಮಾಡಿದ ರಾಜಕಾರಣ ಇಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ಎಂಬ ಬಸ್ಸು ಅತ್ಯುತ್ತಮವಾಗಿದೆ ಆದರೆ ಅದನ್ನು ಓಡಿಸುವ ಬಸ್ ಡ್ರೈವರ್ ಕಂಡಕ್ಟರ್ ಮತ್ತು ಪಯಣ ಮಾಡುವ ಪ್ರಯಾಣಿಕರು ಅತ್ಯಂತ ಕೆಟ್ಟವರಾದರೆ ಆ ಬಸ್ಸಿನಿಂದ ಏನು ಮಾಡಲು ಸಾಧ್ಯ ಇಂತಹ ವಾತಾವರಣ ಕರ್ನಾಟಕದಲ್ಲಿದೆ ಎಂದರು.
ಬಿಜೆಪಿ ಕೇಂದ್ರಿಯ ನಾಯಕತ್ವ ಭಾರಿ ಮಹತ್ವಾಕಾಂಕ್ಷೆಯೊಂದಿಗೆ ಇಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ ಇದಕ್ಕಾಗಿ ಅದು ಗುಜರಾತ್ ಮಾದರಿಯನ್ನು ಪ್ರಯೋಗಿಸಲು ಮುಂದಾಗಿದೆ ಆದರೆ ಕರ್ನಾಟಕದಲ್ಲಿ ಮೋದಿ ಮತ್ತು ಗುಜರಾತ್ ಮಾದರಿಯ ಚುನಾವಣೆ ಇಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು
ಶಿವಮೊಗ್ಗ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ತಮ್ಮ ಮೇಲೆ ಒತ್ತಡವಿದೆ ಆಟೋ ಚಾಲಕರು ರೈತರು ಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗದ ಜನ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ನನಗೆ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವುದು ಮುಖ್ಯ ಅದಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವವರೆಗೆ ನಾನು ಯಾವುದೇ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಸ್ಪರ್ಧೆ ಮಾಡಬೇಕೆಂದಾಗ ಎಲ್ಲರನ್ನೂ ಕೇಳಿಯೇ ನಿರ್ಧಾರ ಪ್ರಕಟಿಸುತ್ತೇನೆ ಈ ಸಮಯದಲ್ಲಿ ನನ್ನ ವಿರುದ್ಧ ಈಶ್ವರಪ್ಪ ಅವರೇ ಆಗಲಿ ಅಥವಾ ಅವರ ಮಗನೇ ಸ್ಪರ್ಧೆ ಮಾಡಿದರು ನಾನು ಹಿಂದೆ ಸರಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

