ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕಾವು ನಿಧಾನವಾಗಿ ಏಳತೊಡಗಿದೆ.ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.ಅಧಿಕಾರದ ಗದ್ದುಗೆ ಹಿಡಿಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ರಣತಂತ್ರ ರೂಪಿಸುತ್ತಿದೆ
ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ದಾಖಲೆ ನಿರ್ಮಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಈ ಬಾರಿ ಬಿಜೆಪಿ ಕೂಟವನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಪ್ರತಿಪಕ್ಷಗಳ ಒಕ್ಕೂಟ ರಣತಂತ್ರ ರೂಪಿಸುತ್ತಿದೆ.
ಇದಕ್ಕಾಗಿ ಪ್ರತಿಪಕ್ಷಗಳ ಮುಖಂಡರು ತಮ್ಮೆಲ್ಲ ಪ್ರತಿಷ್ಠೆಗಳನ್ನು ಬದಿಗೊತ್ತಿ ನರೇಂದ್ರ ಮೋದಿ ಅವರ ಗೆಲುವಿನ ಓಟಕ್ಕೆ ಲಗಾಮು ಹಾಕಲೇಬೇಕು ಎಂದು ಹಟಕ್ಕೆ ಬಿದ್ದವರಂತೆ ಕೆಲಸ ಮಾಡುತ್ತಿದ್ದಾರೆ.
ವ್ಯವಸ್ಥಿತ ಪ್ರಚಾರ ಹಾಗೂ ರಣನೀತಿಯ ಮೂಲಕ ಕಾಂಗ್ರೆಸ್ ನೇತೃತ್ವದ ಯು.ಪಿ.ಎ.ಮೈತ್ರಿಕೂಟವನ್ನು ಸೋಲಿಸಿ 2014 ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, 2019 ರ ಸಾರ್ವತ್ರಿಕ ಚುನಾವಣೆಯಲ್ಲೂ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈಗ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನ ನಡೆಸಿದೆ.
2024 ರ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬ ಕುರಿತಂತೆ ಹಲವಾರು ಮಾಧ್ಯಮ ಸಂಸ್ಥೆಗಳು ಚುನಾವಣಾ ಪರಿಣಿತರು ಮತ್ತು ರಾಜಕೀಯ ಪಂಡಿತರು ವಿಶ್ಲೇಷಣೆ ಮತ್ತು ಸಮೀಕ್ಷೆಗಳನ್ನು ಮಾಡಿದ್ದಾರೆ. ಬಹುತೇಕ ಈ ಎಲ್ಲಾ ಸಮೀಕ್ಷೆಗಳ ವರದಿಯಲ್ಲಿ ಮೋದಿ ಸರ್ಕಾರ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಮತ್ತೊಂದೆಡೆಯಲ್ಲಿ ಚುನಾವಣಾ ಪರಿಣಿತರು ನೀಡಿರುವ ಸಮೀಕ್ಷೆಗಳ ಈ ಎಲ್ಲಾ ಭವಿಷ್ಯಗಳನ್ನು ಹುಸಿಯಾಗಿಸಿ ನರೇಂದ್ರ ಮೋದಿ ನೇತೃತ್ವದ ಮೈತ್ರಿಕೂಟವನ್ನು ಸೋಲಿಸುತ್ತೇವೆ ಎಂದು ಪ್ರತಿತಂತ್ರ ರೂಪಿಸುತ್ತಿರುವ ಇಂಡಿಯಾ ಮೈತ್ರಿಕೂಟ ಸಂಘಟಿತ ಪ್ರಯತ್ನ ಆರಂಭಿಸಿದೆ.
ಆದರೆ ಈ ಸಂಘಟಿತ ಪ್ರಯತ್ನ ಲೆಕ್ಕಾಚಾರ ಮತ್ತು ಕಾರ್ಯತಂತ್ರ ಏನೇ ಇರಲಿ ಕೇಂದ್ರದಲ್ಲಿ ಮತ್ತೆ ಎನ್ ಡಿ ಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರ ಇಡಲು ಸಾಧ್ಯ ಇಲ್ಲ ಎನ್ನುತ್ತಾರೆ ರಾಜಕೀಯ ಪರಿಣತರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಹಲವು ರೀತಿಯಲ್ಲಿ ಪ್ರಯತ್ನಪಟ್ಟರೂ ಮೋದಿ ಮ್ಯಾಜಿಕ್‌ಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಲೆಕ್ಕಾಚಾರಗಳ ಮೂಲಕ ಹೇಳುತ್ತಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟವನ್ನು ಸೋಲಿಸುತ್ತೇವೆ ಎಂಬ ಉತ್ಸಾಹದಲ್ಲಿ ಮುನ್ನುಗ್ಗುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾಕ್ಕೆ ಸ್ಪಷ್ಟ ಕಾರ್ಯ ಸೂಚಿಯೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಪ್ರಧಾನಿ ಅಭ್ಯರ್ಥಿ ಕುರಿತಂತೆ ಇಂಡಿಯಾ ಮೈತ್ರಿಕೂಟದಲ್ಲಿನ ಭಿನ್ನಮತ ಈಗಾಗಲೇ ಜಗ ಜಾಹೀರಾಗಿದೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಇನ್ನು ಪ್ರಧಾನಿ ಮೋದಿ ಅವರಿಗೆ ಪರ್ಯಾಯ ಎಂದು ಬಿಂಬಿಸಲಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯ ಮೂಲಕ ಉದ್ದೇಶದ ಗಮನ ಸೆಳೆದಿದ್ದಾರೆ. ಈ ಯಾತ್ರೆಗೆ ಸಾಕಷ್ಟು ಪ್ರಮಾಣದಲ್ಲಿ ಜನಬೆಂಬಲ ವ್ಯಕ್ತವಾಗಿದೆ. ಆದರೆ ಈ ಎಲ್ಲವೂ ಮತಗಳಾಗಿ ಪರಿವರ್ತನೆ ಯಾಗಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಾರಣವಿಷ್ಟೇ ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಮಾಡುವ ಭಾಷಣ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ವಿರುದ್ಧ ಟೀಕೆಗೆ ಮೀಸಲು.ಎಲ್ಲಿಯೂ ತಾವು ಎನು ಮಾಡುತ್ತೇವೆ.ತಮ್ಮ ಸರ್ಕಾರ ಬಂದರೆ ಯಾವ ದೂರದೃಷ್ಟಿಯ ಆಡಳಿತ ಬರಲಿದೆ.ಎನು ಬದಲಾವಣೆ ತರುತ್ತೇವೆ ಎಂಬ ಬಗ್ಗೆ ಚಕಾರ ಎತ್ತುತ್ತಿಲ್ಲ.
ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಸಹಜವಾಗಿ ಈ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಕೂಡ ಕಂಡುಬರುತ್ತಿದೆ. ಆದರೆ, ಈ ಅಲೆಯನ್ನು ತಮ್ಮ ಪರ ಮತಗಳನ್ನಾಗಿ ಪರಿವರ್ತಿಸುವ ಪ್ರತಿಪಕ್ಷಗಳ ನಾಯಕತ್ವ ಕಂಡುಬರುತ್ತಿಲ್ಲ.
ರಾಹುಲ್ ಗಾಂಧಿ ಮಾಡುವ ಭಾಷಣಗಳು ಜನರನ್ನು ತಲುಪುತ್ತಿಲ್ಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹತ್ತು ವರ್ಷಗಳಲ್ಲಿ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದೆ ಅದೇ ರೀತಿಯಲ್ಲಿ ಕೆಲವು ತಪ್ಪು ನಿರ್ಧಾರಗಳು ಕೂಡ ಆಗಿವೆ. ತಪ್ಪುಗಳನ್ನು ಹೇಳುವುದರಿಂದ ಜನತೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ ಚಲಾಯಿಸುವುದಿಲ್ಲ ಬದಲಿಗೆ ಆ ತಪ್ಪುಗಳನ್ನು ಯಾವ ರೀತಿ ಸರಿಪಡಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಅದು ಮತದಾರರಿಗೆ ಮನವರಿಕೆಯಾಗಿ ಮಾತ್ರ ಅವರು ಬೆಂಬಲ ವ್ಯಕ್ತಪಡಿಸುತ್ತಾರೆ ಆದರೆ ಇಲ್ಲಿ ಅಂತಹ ಯಾವುದೇ ಭರವಸೆ ಅಥವಾ ವಿಶ್ವಾಸಾರ್ಹ ಧ್ವನಿ ಕೇಳಿ ಬರುತ್ತಿಲ್ಲ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಬಿಂಬಿಸಲಾಗುತ್ತಿರುವ ನಾಯಕನಾಗಿರುವ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಜಿಎಸ್‌ಟಿ ವಿರುದ್ದ ದೇಶದ ಅರ್ಥ ವ್ಯವಸ್ಥೆ ಹಾಗೂ ಉದ್ಯಮ ಪತಿಗಳಾದ ಅಧಾನಿ ಮತ್ತು ಅಂಬಾನಿ ಅವರಿಗೆ ಕೇಂದ್ರ ಸರ್ಕಾರ ನೀಡಿರುವ ಸಹಕಾರದ ಬಗ್ಗೆ ಮಾತನಾಡುತ್ತಾರೆ ಇವು ಆ ಕ್ಷಣದಲ್ಲಿ ಕೇಳಲು ಹಿತಕರ ಎನಿಸಿದರೂ ಕೂಡ ಕೇಂದ್ರ ಸರ್ಕಾರ ತಂದಿರುವ ಜಿಎಸ್ಟಿ ಪದ್ಧತಿಗೆ ಬದಲಾಗಿ ರಾಹುಲ್ ಗಾಂಧಿ ಯಾವ ರೀತಿಯ ತೆರಿಗೆ ಪದ್ಧತಿ ತರಲಿದ್ದಾರೆ.ಅರ್ಥ ವ್ಯವಸ್ಥೆಯ ಸುಧಾರಿಸಲು ಇವರ ಬಳಿ ಇರುವ ಮಾರ್ಗಗಳೇನು? ಅದಾನಿ ಮತ್ತು ಅಂಬಾನಿ ಅವರಿಗೆ ನೀಡುತ್ತಿರುವ ಸಹಕಾರದ ವಿರುದ್ಧ ಇವರ ಯಾವ ಕ್ರಮಗಳು ಇವೆ ಎಂಬ ವಿಷಯದ ಬಗ್ಗೆ ಮಾತ್ರ ಎಲ್ಲಿಯೂ ಮಾತನಾಡುತ್ತಿಲ್ಲ.
ಹೀಗಾಗಿ ಮತದಾರ ಸಹಜವಾಗಿ ಯೋಚನೆ ಮಾಡುತ್ತಾರೆ ಇವರಿಗೆ ಏಕೆ ಮತ ಹಾಕಬೇಕು ಎಂದು.ಅಲ್ಲದೆ ದೇಶದಲ್ಲಿ ಅದಾನಿ ಮತ್ತು ಅಂಬಾನಿ ಮಾತ್ರ ಅಕ್ರಮ ಮಾಡಿದ್ದಾರಾ..ಬೇರೆ ಯಾವುದೇ ಉದ್ಯಮಿ ಮೋಸ ಮಾಡಿಲ್ಲವೇ ಅವರ ಕುರಿತು ರಾಹುಲ್ ಗಾಂಧಿ ಯಾಕೆ ಮಾತನಾಡುತ್ತಿಲ್ಲ ಎಂದು ಯೋಚಿಸುತ್ತಾರೆ.
ಇಷ್ಟಾದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹೀಗಾಗಿಯೇ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಖಚಿತವಾಗಿಯೇ ಹೇಳಬಹುದು ಕಳೆದ 2014ರಲ್ಲಿ ನಡೆದ ಚುನಾವಣೆಯಲ್ಲಿ ಅಂದು ಪ್ರತಿಪಕ್ಷಗಳ ನೇತೃತ್ವ ವಹಿಸಿದ್ದ ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತದೆ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಏನು ಮಾಡಲಿದೆ ಎನ್ನುವುದನ್ನು ಮನದಟ್ಟು ಮಾಡಿದರು ಅಂದು ಅವರು ನೀಡಿದ ಅಚ್ಚೆದಿನ್ ಭರವಸೆ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು ಈಗ ಪ್ರತಿಪಕ್ಷಗಳ ಒಕ್ಕೂಟ ನಡೆಸುತ್ತಿರುವ ಯಾವುದೇ ಪ್ರಚಾರ ಮತ್ತು ನಾಯಕ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಬದಲಾಯಿಸಿದರೆ ಯಾವ ರೀತಿಯ ಸರ್ಕಾರ ಮತ್ತು ನಾಯಕತ್ವ ಸಿಗಲಿದೆ ಎಂಬ ಬಗ್ಗೆ ಏನನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ ಇಂತಹ ಗೊಂದಲಗಳು ಮೋದಿ ನೇತೃತ್ವದ ಸರ್ಕಾರ ಪತನ ಹೊಂದಿ ಬೇರೆ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಗೆ ಹೇಳಬಹುದು ಹೀಗಾಗಿಯೇ ಚುನಾವಣಾ ಪರಿಣಿತರ ಸಮೀಕ್ಷೆಗಳು ಮತ್ತು ಮತದಾರರ ಒಲವು ಸಹಜವಾಗಿ ನರೇಂದ್ರ ಮೋದಿಗೆ ಅವರು ಪ್ರಧಾನಿಯಾಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ.