ಮೈಸೂರು: ಪ್ರಧಾನಿ ಮೋದಿ ಬೆಂಗಳೂರಿನ ಕಾರ್ಯಕ್ರಮಗಳನ್ನು ಪೂರೈಸಿ ಇದೀಗ ಅರಮನೆ ನಗರಿ ಮೈಸೂರಿಗೆ ಬಂದಿಳಿದಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ 2 ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರುವ ಅವರು, ಮೈಸೂರು ವಿಶ್ವ ವಿದ್ಯಾಲಯದ ಅಥ್ಲೆಟಿಕ್ಸ್ನಕ್ರೀಡಾಂಗಣದಲ್ಲಿರುವ ಹೆಲಿಪ್ಯಾಡ್ಗೆ ಸೇನಾ ಹೆಲಿಕಾಪ್ಟ್ನಲ್ಲಿ ಮೋದಿ ಬಂದಿಳಿದಿದ್ದಾರೆ.
ಹೆಲಿಪ್ಯಾಡ್ನಿಂದ ಕಾನ್ವೆಯಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ತೆರಳಿದರು. ಪ್ರಧಾನಿ ಮೋದಿ ಜೊತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮೈಸೂರಿಗೆ ಆಗಮಿಸಿದ್ದಾರೆ.