ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಬೇಸರಗೊಂಡು ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಶಾಸಕ ಹಾಗು ಖ್ಯಾತ ನಟ ಇದೀಗ ತಮ್ಮ ರಾಜಕೀಯ ಬದುಕಿನ ಮತ್ತೊಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಜನತಾಪರಿವಾರದಿಂದ ರಾಜಕೀಯ ಪ್ರವೇಶಿಸಿ ಗೌರಿಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಚಂದ್ರು ನಂತರ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದ್ದರು. ದಶಕಗಳ ಕಾಲ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ನಂತರದಲ್ಲಿ ಕಾಂಗ್ರೆಸ್ ಸೇರಿದ್ದರು.
ಕಾಂಗ್ರೆಸ್ ನಿಂದ ವಿಧಾನಪರಿಷತ್ ಇಲ್ಲವೇ ರಾಜ್ಯಸಭೆ ಸದಸ್ಯತ್ವದ ನಿರೀಕ್ಷೆಯಲ್ಲಿದ್ದ ಇವರಿಗೆ ಯಾವುದೇ ಹುದ್ದೆ ಸಿಗದ ಕಾರಣ ಪಕ್ಷ ತೊರೆದಿದ್ದರು. ಇದೀಗ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೇರಲು ನಿರ್ಧರಿಸಿದ್ದು,ನಾಳೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ನೇತೃತ್ವದಲ್ಲಿ ಆಪ್ ಸೇರಲಿದ್ದಾರೆ.
Previous Articleಚರಣ್ ರಾಜ್ ಕೊಲೆ ಪ್ರಕರಣ, ಮತ್ತೆ ಮೂವರು ಆರೋಪಿಗಳು ಪೋಲಿಸ್ ವಶಕ್ಕೆ…
Next Article 27 ದೇಶಗಳಿಗೆ ಹರಡಿದ ಮಂಕಿ ಪಾಕ್ಸ್: ಹೆಚ್ಚಿದ ಆತಂಕ