ಮುಂಬೈ: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ನಿಷೇಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಜೈವಿಕ ಎಥೆನಾಲ್ನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ.
ಆಳವಾದ ಬಾವಿಯ ನೀರಿನಿಂದ ಹಸಿರು ಹೈಡ್ರೋಜನ್ ತಯಾರಿಸಬಹುದು ಮತ್ತು ಕೆಜಿಗೆ 70 ರೂ.ಗೆ ಮಾರಾಟ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದ್ದು, ಇದರಿಂದಾಗಿ ದೇಶದಲ್ಲಿ ಪಳಯುಳಿಕೆ ಇಂಧನವನ್ನು ನಿಷೇಧಿಸಲಾಗುವುದು ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ.
ರೈತರು ಕೇವಲ ಆಹಾರ ಪೂರೈಕೆದಾರರಾಗದೆ ಇಂಧನ ಪೂರೈಕೆದಾರರಾಗುವ ಅಗತ್ಯವನ್ನು ಗಡ್ಕರಿ ಪ್ರಸ್ತಾಪಿಸಿದರು. ಕೇವಲ ಗೋಧಿ, ಭತ್ತ, ಜೋಳ ಹಾಕುವುದರಿಂದ ಯಾವ ರೈತನೂ ತನ್ನ ಭವಿಷ್ಯ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರದಂದು ಡಾ. ಪಂಜಾಬ್ರಾವ್ ದೇಶ್ಮುಖ್ ಕೃಷಿ ವಿಶ್ವವಿದ್ಯಾಲಯದಿಂದ ಗಡ್ಕರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಗಡ್ಕರಿ ಪೆಟ್ರೋಲ್ ನಿಷೇಧದ ಬಗ್ಗೆ ಮಾತನಾಡಿದರು.
ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ನಿಷೇಧ: ಮಂತ್ರಿ ನಿತಿನ್ ಗಡ್ಕರಿ
Previous Articleದೈವದ ಮೊರೆ ಹೋದ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ
Next Article ಕಡಿಮೆಯಾದ ಮಳೆ ಅಬ್ಬರ ನೆರೆ ಇಳಿಮುಖ, ಭತ್ತದ ಬೆಳೆ ದೇವರೆಗತಿ