ಸ್ಯಾಂಡಲ್ ವುಡ್ ಪ್ರತಿಭಾವಂತ ನಟಿ ಶಾನ್ವಿ ಶ್ರೀವಾಸ್ತವ್ ಮರಾಠಿ ಚಿತ್ರರಂಗ ಪ್ರವೇಶಿಸಿದ್ದಾರೆ. ಮರಾಠಿಯಲ್ಲಿ ಸಮಿತ್ ಕಕ್ಕಡ್ ನಿರ್ದೇಶಿಸಲಿರುವ ರಾಂತಿ ಚಿತ್ರದಲ್ಲಿ ಶರದ್ ಕೇಳ್ಕರ್ ಜೊತೆಗೆ ಶಾನ್ವಿ ನಟಿಸಲಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿರೋ ಶಾನ್ವಿ ಅಭಿನಯಿಸುತ್ತಿರೋ ಚಿತ್ರ ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಉಗ್ರಂ ಚಿತ್ರದ ರೀಮೇಕ್ ಎನ್ನೋದು ಗಮನಾರ್ಹ. ಕನ್ನಡದ ಉಗ್ರಂ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿ ಕೆರಿಯರ್‌ಗೆ ಮರು ಜೀವ ಕೊಟ್ಟಂತಹ ಸಿನಿಮಾ. ಈ ಚಿತ್ರದಿಂದ ಶ್ರೀಮುರುಳಿ ಸಿನಿ ಕೆರಿಯರ್‌ಗೆ ಬಿಗ್ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಈಗ ಈ ಚಿತ್ರ ಮರಾಠಿಯಲ್ಲಿ ತಯಾರಾಗುತ್ತಿದೆ. ಇದರಲ್ಲಿ ನಾಯಕಿಯಾಗಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಳ್ತಿದ್ದಾರೆ. ಹರಿಪ್ರಿಯಾ ಪಾತ್ರಕ್ಕೆ ಶಾನ್ವಿ ಜೀವತುಂಬಲಿದ್ದಾರೆ. ಕನ್ನಡದಲ್ಲಿ
ಉಗ್ರಂ ಸಿನಿಮಾ ಹಿಟ್ ಆದ ಹಾಗೆ ಮರಾಠಿಯಲ್ಲಿ ಕೂಡ ಯಶಸ್ವಿಯಾಗತ್ತಾ ಕಾದು ನೋಡಬೇಕು.
ಉಗ್ರಂ ರೀಮೇಕ್ ಮೂಲಕ ಮರಾಠಿ ಚಿತ್ರರಂಗ ಪ್ರವೇಶಿಸಿದ ಶಾನ್ವಿ
Previous Articleಶುಕ್ರವಾರ ಹಾರಲಿದೆ ಗಾಳಿಪಟ..
Next Article ಜಮೀರ್ ಅಹ್ಮದ್ ಹೇಳಿದ ಹಾಗೆ ಏನೂ ಆಗಲ್ಲ…!!