Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮುರಸೋಳಿ ಸೆಲ್ವಂ ಎಂಬ ಗಾರುಡಿಗ.
    ಮತ್ತಷ್ಟು

    ಮುರಸೋಳಿ ಸೆಲ್ವಂ ಎಂಬ ಗಾರುಡಿಗ.

    vartha chakraBy vartha chakraಅಕ್ಟೋಬರ್ 10, 2024Updated:ಅಕ್ಟೋಬರ್ 10, 20244 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    (ಕನ್ನಡ ಖಾಸಗಿ ಟಿವಿ ಪಿತಾಮಹನಿಗೆ ನಮನ)
    ಉದಯ ಟಿವಿ ಇದು ಕನ್ನಡ ಕಸ್ತೂರಿ ಎಂದು ಸುಮಾರು ಎರಡೂವರೆ ದಶಕಗಳ ಹಿಂದೆ ಟಿವಿ ಪರದೆಯ ಮೇಲೆ ಕಂಗೊಳಿಸಿದ ಕನ್ನಡದ ಮೊಟ್ಟ ಮೊದಲ ಉಪಗ್ರಹ ವಾಹಿನಿ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ.
    ಅಂದು ಕನ್ನಡ ಕಸ್ತೂರಿ ಎಂದು ಆರಂಭಗೊಂಡ ಉದಯ ಟಿವಿ ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಅಂದು ಶಿವಾಜಿನಗರ ಬಸ್ ಸ್ಟಾಂಡ್ ಸಮೀಪದ ಪುಟ್ಟ ಕಚೇರಿಯೊಂದರಲ್ಲಿ ಆರಂಭಗೊಂಡ ಈ ವಾಹಿನಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಅಪಾರ ಕೊಡುಗೆ ನೀಡಿದ್ದು ಮುರುಸೋಳಿ ಸೆಲ್ವಂ.
    ಉದಯ ಟಿವಿ ಅಧ್ಯಕ್ಷರಾಗಿದ್ದ ಅವರ ವೃತ್ತಿಪರತೆ, ಎಲ್ಲರನ್ನೂ ಒಳಗೊಳ್ಳುವ ಸ್ನೇಹಮಯ ವ್ಯಕ್ತಿತ್ವ, ಅತ್ಯುನ್ನತ ಹುದ್ದೆಯಲ್ಲಿದ್ದರೂ ಅಪಾರ ಶ್ರೀಮಂತರಾಗಿದ್ದರೂ ಎನಗಿಂತ ಕಿರಿಯರಿಲ್ಲ ಎಂದು ಎಲ್ಲರೊಂದಿಗೆ ಬೆರತು ಒಂದಾಗುವ ಪ್ರವೃತ್ತಿ.
    ದೃಶ್ಯ ಮಾಧ್ಯಮದ ಒಳ ಹೊರಗುಗಳನ್ನು ಅಪಾರವಾಗಿ ಬಲ್ಲವರಾಗಿದ್ದ ಸೆಲ್ವಂ ಅವರ ದೂರ ದೃಷ್ಟಿಯ ಪರಿಣಾಮ ಉದಯ ಟಿವಿ ಕನ್ನಡದ ಕಸ್ತೂರಿ ಯಾಗಿ ನಾಡಿನೆಲ್ಲೆಡೆ ಕಂಪನ್ನು ಬೀರಿತು.
    ಮುರಸೋಳಿ ಸೆಲ್ವಂ ಅವರದ್ದು ದೈತ್ಯ ಪ್ರತಿಭೆ. ಉದಯ ಟಿವಿ ಕಟ್ಟುವ ಮುನ್ನವೇ ಶಾಂಭವಿ, ಭೈರವಿ ,ದುರ್ಗಾ ಶಕ್ತಿ ಇವೆ ಮೊದಲಾದ ಹಲವು ಕನ್ನಡದ ಸಿನಿಮಾಗಳನ್ನು ನಿರ್ಮಿಸಿ ಕನ್ನಡಮ್ಮನ ಸೇವೆ ಮಾಡಿದವರು.
    ನಟ ನಿರ್ಮಾಪಕ ದ್ವಾರಕೀಶ್, ರೆಬಲ್ ಸ್ಟಾರ್ ಅಂಬರೀಶ್ ಪ್ರಣಯರಾಜ ಶ್ರೀನಾಥ್‌ ಸೇರಿದಂತೆ ಹಲವು ಖ್ಯಾತನಾಮರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸೆಲ್ವಂ ಅವರು ಉದಯ ಟಿವಿ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಮುಂಗಾರು ಮಳೆ ಗಣೇಶ್, ರಮೇಶ್ ಅರವಿಂದ್,ಹರ್ಷೀಕಾ ಪೂಣಚ್ಚ ರಂಗಿತರಂಗದ ಭಂಡಾರಿ ಕುಟುಂಬ ಶೈಲಜಾ ನಾಗ್ ಸೇರಿದಂತೆ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದರು. ಕನ್ನಡ ಚಿತ್ರರಂಗದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಅವರು ಅತ್ಯಂತ ಸಂಕಷ್ಟದ ಸಮಯದಲ್ಲಿದ್ದಾಗ ಅವರ ಜೊತೆಯಲ್ಲಿ ನಿಂತು ಆಪ್ತಮಿತ್ರ ಸಿನಿಮಾ ತಯಾರಾಗುವಂತೆ ಮಾಡಿದರು.
    ಉದಯ ಟಿವಿ ಸುದ್ದಿ ವಿಭಾಗಕ್ಕೆ ತಮ್ಮದೇ ಆದ ವಿಶಿಷ್ಟ ರೀತಿಯ ದೃಷ್ಟಿಕೋನದ ಮೂಲಕ ಮಾರ್ಗದರ್ಶನ ಮಾಡುತ್ತಿದ್ದ ಸೆಲ್ವಂ ಅವರು ಎಂದಿಗೂ ಸುದ್ದಿಯನ್ನು ಮಾರಾಟದ ಸರಕಾಗಿ ನೋಡಲಿಲ್ಲ. ಸುದ್ದಿಯನ್ನು ಸುದ್ದಿಯಾಗೆ ನೋಡಬೇಕು ಎಂದಿಗೂ ಅದನ್ನು ಉತ್ಪ್ರೇಕ್ಷಿತ ಹಾಗೂ ಅತಿ ರಂಜನೀಯ ಗೊಳಿಸಬಾರದು ಎಂದು ಹೇಳಿ ಅದನ್ನು ಚಾಚೂ ತಪ್ಪದೇ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದರು.
    ತಮಿಳಿನ ಮುರಸೋಳಿ, ದಿನಕರನ್ ಕುಂಕುಮಂ ಪತ್ರಿಕೆಗಳ ಸಂಪಾದಕರಾಗಿ ಸುದ್ದಿಯ ನಾಡಿಮಿಡಿತ ಬಲ್ಲವರಾಗಿದ್ದ ಸೆಲ್ವಂ ಅವರು ಉದಯ ಟಿವಿಯ ಸುದ್ದಿ ಮತ್ತು ಚರ್ಚಾ ಕಾರ್ಯಕ್ರಮಗಳಲ್ಲಿ ಎಂದಿಗೂ ಏಕೆ ಪಕ್ಷೀಯವಾಗಲು ಬಿಡಲಿಲ್ಲ. ನೊಂದವರ ಪಕ್ಷಪಾತಿಯಾಗಿ ಸುದ್ದಿ ಬರಬೇಕು ಎಂದು ಅಘೋಷಿತ ಫರ್ಮಾನು ಹೊರಡಿಸಿದ ಪರಿಣಾಮವಾಗಿ ಉದಯ ಟಿವಿಯ ಸುದ್ದಿ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
    ಕತೆಗಾರವಾಗಿ ತಂತ್ರಜ್ಞರಾಗಿ ನಿರ್ಮಾಪಕರಾಗಿ ಪತ್ರಕರ್ತರಾಗಿಯೂ ಬಹುಮುಖ ಪ್ರತಿಭೆಯಾಗಿದ್ದ ಸೆಲ್ವಂ ಅವರು ಅಪ್ಪಟ ಕನ್ನಡಾಭಿಮಾನಿ. ಕನ್ನಡ ಚಿತ್ರರಂಗದ ವಾರ್ಷಿಕ ಪ್ರಶಸ್ತಿಗಳ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅವರು ವರನಟ ಡಾ.ರಾಜ್ ಕುಮಾರ್ ಅವರಿಗಾಗಿ ಮಾಡಿಕೊಟ್ಟ ಧನ್ಯಮಿಲನ ರೆಬಲ್ ಸ್ಟಾರ್ ಅಂಬರೀಶ್ ಅವರಿಗಾಗಿ ವಿಶೇಷವಾಗಿ ವಿನ್ಯಾಸ ಪಡಿಸಿದ ಅಂಬಿ ಸಂಭ್ರಮ ಕಾರ್ಯಕ್ರಮಗಳು ಜನ ಮಾನಸದಲ್ಲಿ ಇನ್ನು ಹಸಿರಾಗಿವೆ.
    ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಯಾದ ಸೆಲ್ವಂ ಅವರು ಸರ್ವಜ್ಞನ ತ್ರಿಪದಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು ಸರ್ವಜ್ಞನ ಸಮಕಾಲಿನ ತಮಿಳುನಾಡಿನ ತಿರುವಳ್ಳುವರ್ ಅವರ ತಿರುಕ್ಕುರಳ್ ಮತ್ತು ಸರ್ವಜ್ಞನ ತ್ರಿಪದಿಗಳ ಸಾಮ್ಯತೆಯನ್ನು ಚೆನ್ನಾಗಿ ಗುರುತಿಸಿದ್ದ ಅವರು ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಬೆಂಗಳೂರಿನಲ್ಲಿ ತಿರುವಳ್ಳುವರು ಪ್ರತಿಮೆ ಅನಾವರಣದಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಮೂಲಕ ಕನ್ನಡ ತಮಿಳು ಸಾಮರಸ್ಯಕ್ಕಾಗಿ ಪ್ರಯತ್ನ ನಡೆಸಿದ್ದರು.
    ಕರ್ನಾಟಕದಲ್ಲಿ ಕಂಡು ಕೇಳರಿಯದ ಬರಗಾಲ ಮತ್ತು ಪ್ರವಾಹ ಸ್ಥಿತಿ ತಲೆದೂರಿದಾಗ ತಮ್ಮ ಸಂಸ್ಥೆಯ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾಹರಣೆಗೆ ನೀಡುವ ಮೂಲಕ ಗಮನ ಸೆಳೆದಿದ್ದರು.
    ಬದುಕು ಬರಹ ಎಲ್ಲದರಲ್ಲೂ ಅತ್ಯಂತ ಸರಳತೆ ಮತ್ತು ವಿನಯತೆಯನ್ನು ಮೈಗೂಡಿಸಿಕೊಂಡಿದ್ದ ಸೆಲ್ವಂ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ ಆದರೆ ಅವರು ಬಿಟ್ಟು ಹೋಗಿರುವ ಸಾಧನೆಯ ಶಿಖರಗಳು ಚಿರಂಜೀವಿಯಾಗಿವೆ.

    ಆರ್.ಎಚ್.ನಟರಾಜ್, ಪತ್ರಕರ್ತ.

    #sandalwood Bangalore Entertainment Karnataka News sun tv tamil nadu udaya tv ದರ್ಶನ್ ಸಿನಿಮ ಸುದೀಪ್
    Share. Facebook Twitter Pinterest LinkedIn Tumblr Email WhatsApp
    Previous Articleರಾಮನಗರ ಮುಕುಟಕ್ಕೆ ಮತ್ತೊಂದು ಗರಿ.
    Next Article ಲೋಕಾಯುಕ್ತ ಪೊಲೀಸರಿಗೆ ವಿವರಣೆ ನೀಡಿದ ಸಿಎಂ ಭಾವಮೈದ.
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025

    4 ಪ್ರತಿಕ್ರಿಯೆಗಳು

    1. Scotthem on ಡಿಸೆಂಬರ್ 6, 2025 4:47 ಅಪರಾಹ್ನ

      ?Celebremos a cada creador del destino!
      Jugar en Casino sin KYC permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casino sin verificaciГіn. Gracias a esta flexibilidad, cada sesiГіn se vuelve mГЎs cГіmoda al usar servicios como casinos sin kyc.
      Jugar en crypto casino no kyc permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casino sin dni. Gracias a esta flexibilidad, cada sesiГіn se vuelve mГЎs cГіmoda al usar servicios como casino sin kyc.
      Visita casinoretirosinverificacion.com/ y juega fГЎcil – п»їhttps://casinoretirosinverificacion.com/
      ?Que la suerte te beneficie con aguardandote magnificos retribuciones relucientes !

      Reply
    2. fen daison_idOt on ಡಿಸೆಂಬರ್ 12, 2025 6:08 ಅಪರಾಹ್ನ

      официальный дайсон https://fen-d-3.ru/ .

      Reply
    3. kypit kyrsovyu_tsOn on ಡಿಸೆಂಬರ್ 12, 2025 6:18 ಅಪರಾಹ್ನ

      написание учебных работ http://kupit-kursovuyu-21.ru/ .

      Reply
    4. kypit kyrsovyu_dpOl on ಡಿಸೆಂಬರ್ 12, 2025 6:24 ಅಪರಾಹ್ನ

      заказать курсовой проект заказать курсовой проект .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kypit kyrsovyu_zrPi ರಲ್ಲಿ ಲಂಚ ಆರೋಪದ ಸುಳಿಯಲ್ಲಿ Pralhad Joshi
    • go88 ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • fen daison_glOt ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe