ಬೆಂಗಳೂರು, ಡಿ.6- ಮದ್ಯದ ಅಮಲಿನಲ್ಲಿ 1500 ರೂಪಾಯಿಗಳ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಸಿಂಗಸಂದ್ರದಲ್ಲಿ ನಡೆದಿದೆ.
ಕೊಲೆಯಾದವರನ್ನು ಸಿಂಗಸಂದ್ರದ ಗೋಪಾಲ್ ಎಂದು ಗುರುತಿಸಲಾಗಿದೆ.
ಬಾರ್ ವೊಂದರಲ್ಲಿ ಸ್ನೇಹಿತರಾದ ಗೋಪಾಲ್, ಕರೇಗೌಡ ಮತ್ತು ಶಶಿ ಸೇರಿ ಮೂವರು ಮದ್ಯ ಸೇವನೆ ಮಾಡುತ್ತಿದ್ದರು.ಮೂವರುಕಂಠ ಪೂರ್ತಿ ಕುಡಿದಿದ್ದಾಗ ಇವರ ಸ್ನೇಹಿತರಾದ ಪ್ರದೀಪ್ ಮತ್ತು ಗಿರೀಶ್ ಎನ್ನುವ ಮತ್ತಿಬ್ಬರು ಬಂದಿದ್ದರು.
ಎಲೆಕ್ಟ್ರಿಷಿಯನ್ ಕೆಲಸದ ಸಂಬಂಧ ಕರೇಗೌಡನಿಗೆ ಗಿರೀಶ್ 1,500 ರೂಪಾಯಿ ಕೊಡಬೇಕಾಗಿತ್ತು. ಬಾರ್ ನಲ್ಲಿದ್ದ ಕರೇಗೌಡ ಮದ್ಯದ ಅಮಲಿನಲ್ಲಿ ಗಿರೀಶ್ ಕಂಡ ಕೂಡಲೇ ಹಣ ಕೊಡುವಂತೆ ಕೇಳಿದ್ದಾನೆ.
ಹಣ ಕೊಡುವುದಿಲ್ಲ ಅದೇನು ಮಾಡ್ಕೋತ್ತೀಯೋ ಮಾಡ್ಕೋ ಎಂದು ಗಿರೀಶ್ ಆವಾಜ್ ಹಾಕಿದ್ದಾನೆ.ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.ಆಗ ಮಧ್ಯಪ್ರವೇಶಿಸಿದ ಸ್ನೇಹಿತ ಗೋಪಾಲ್, ಗಿರೀಶ್ ನಿಗೆ ಹೊಡೆದು ಕರೇಗೌಡಗೆ ಹಣ ಕೊಡಿಸಿದ್ದ.ಈ ನಡುವೆ ಶಶಿ ತನ್ನ ಮನೆಗೆ ಹೋಗಿದ್ದರು.
ಇದಾದ ನಂತರ ಶಶಿಗೆ ಫೋನ್ ಮಾಡಿದ ಗಿರೀಶ್ ಅವರನ್ನು ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದಾನೆ.ಈ ವಿಷಯವನ್ನು ಗಿರೀಶ್ ಗೆ ತಿಳಿಸಿದ್ದಾರೆ.ಅದಾದ ಬಳಿಕ ಗೋಪಾಲ್, ಕರೇಗೌಡ, ಶಶಿಧರ್ ಮೂವರು ಗಿರೀಶ್ ಮನೆಗೆ ಹೋಗಿದ್ದಾರೆ.
ಮೂವರೂ ಗಿರೀಶ್ ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿಗೆ ಹೇಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಗಿರೀಶ್ ಅಡುಗೆ ಮನೆಯಿಂದ ಹೊರಬಂದು ಚಾಕುವಿನಿಂದ ಹಿ ಗೋಪಾಲ್ ಗೆ ಚುಚ್ಚಿ ಪರಾರಿಯಾದ. ಕೂಡಲೇ ಅಲ್ಲಿದ್ದ ಸ್ನೇಹಿತರು ಗಾಯಗೊಂಡಿದ್ದ ಗಿರೀಶ್ ನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಗೋಪಾಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ಗಿರೀಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.