ಬೆಂಗಳೂರು, ಜೂ.20-ನಂದಿಬೆಟ್ಟದಲ್ಲಿ ನಿಂತು ಸೂರ್ಯೋದಯ ವೀಕ್ಷಿಸಲು ಬೈಕ್ ನಲ್ಲಿ ಜಾಲಿ ರೈಡ್ ಗೆ ಹೊರಟ ಯುವಕರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಣಿವೆಪುರದಲ್ಲಿ ನಡೆದಿದೆ.
ಶ್ರೀನಗರದ ರಾಕೇಶ್(26) ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಸುನೀಲ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇವರಿಬ್ಬರೂ ನಂದಿಬೆಟ್ಟದಲ್ಲಿನ ಸೂರ್ಯೋದಯ ನೋಡಲು ನಿನ್ನೆ ಮುಂಜಾನೆ 4ರ ವೇಳೆ ನಗರದಿಂದ ಬೈಕ್ ನಲ್ಲಿ ಹೊರಟಿದ್ದರು.
ಕಣಿವೆಪುರದ ಬಳಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಸುನೀಲ್ ನ ಬೆನ್ನೆಲುಬು ಮುರಿದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.