ಬೆಂಗಳೂರು, ಸೆ.1 – ಕೈಗಾರಿಕೆ ಬೆಳವಣಿಗೆ ಉತ್ತೇಜಿಸುವ ಹಾಗೂ ಬಂಡವಾಳ ಹೂಡಿಕೆಗೆ ನೆರವು ನೀಡುವ ಉದ್ದೇಶದ ಹೊಸ ಕೈಗಾರಿಕಾ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ ತಿಳಿಸಿದ್ದಾರೆ.
ಇಲಾಖೆಯ ನೂರು ದಿನಗಳ ಪ್ರಗತಿಯ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು,
ಹೊಸ ಕೈಗಾರಿಕಾ ನೀತಿ ಸಿದ್ಧ ಪಡಿಸಲು ತಜ್ಞರ ಸಮಿತಿ ಮಾಡಲಾಗುವುದು ಈ ಸಮಿತಿ ನೀಡುವ ವರದಿ ಹೊಸ ಕೈಗಾರಿಕೆ ನೀತಿ ಪ್ರಕಟಿಸಲಾಗುವುದು. ಇದರಲ್ಲಿ ಉತ್ಪಾದನೆ ಮತ್ತು ರಪ್ತು ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರದಲ್ಲಿ ಎರಡು ಮಾತಿಲ್ಲ. ಈ ನೂರು ದಿನಗಳಲ್ಲಿ ಸುಮಾರು 60 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ ಫಕ್ಸಕಾನ್, ಟಾಟಾ ಟೆಕ್ನಾಲಜಿ, ಜೆಎಸ್ಡಬ್ಲ್ಯೂ ಎನರ್ಜಿ, ಸೆಮಿ ಕಂಡಕ್ಟರ್ ಉಪಕರಣ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಗಿದೆ ಎಂದು ತಿಳಿಸಿದರು
ಈ ವರ್ಷ 1 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧ್ಯವಾಗುವಂತೆ ಮಾತುಕತೆಗಳು ನಡೆಯುತ್ತಿವೆ ,ಉದ್ಯೋಗ ಪೂರಕ ಶಿಕ್ಷಣ ನೀಡುವಂತೆ ಇದರ ಅಂತರ ನೀಗಿಸುವ ಗುರಿ ನಮ್ಮದು. ಬೆಂಗಳೂರಿನ ಹೊರ ವಲಯಗಳಲ್ಲಿ ಇರುವ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಆಗಬೇಕಿದೆ. 190 ಕೈಗಾರಿಕಾ ಪ್ರದೇಶಗಳು ರಾಜ್ಯದಲ್ಲಿ ಇವೆ. ಕೈಗಾರಿಕಾ ಪ್ರದೇಶಗಳನ್ನು ಮೂರು ಹಂತಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು ಕೈಗಾರಿಕಾ ಪ್ರದೇಶಗಳ ನಿರ್ವಹಣೆ ಗೆ ಅಸೋಸಿಯೇಷನ್ ಸೇರ್ಪಡೆ ಮಾಡಿಕೊಳ್ಳುವ ದಿಶೆಯಲ್ಲಿ ಒಂದು ಮಾದರಿ ತಯಾರು ಮಾಡುತ್ತಿದ್ದೇವೆ. ಸುಮಾರು 300 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಆಗುತ್ತದೆ. ಡ್ರೋನ್ ಸರ್ವೆ ಮೂಲಕ ಇಂಡಸ್ಟ್ರಿಯಲ್ ಏರಿಯಾಗಳ ಕೊರತೆ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಆರಂಭಿಸುವ ಪ್ರಸ್ತಾವವಿದೆ. ಶೀಘ್ರದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸುವ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಲಾಗುವುದು. ಅದೇ ರೀತಿ ಸ್ವಂತ ವಿಮಾನಯಾನ ಕಂಪನಿ ಸ್ಥಾಪಿಸಿ, ರಾಜ್ಯದ ಒಳಗೆ ಸೇವೆ ಒದಗಿಸುವ ಪ್ರಸ್ತಾವವಿದೆ’ ಎಂದರು.
ಒಂದು ಹೊಸ ವಿಮಾನ ಖರೀದಿಗೆ ₹ 200 ಕೋಟಿ ವೆಚ್ಚವಾಗಲಿದೆ. ₹600 ಕೋಟಿ ವೆಚ್ಚದಲ್ಲಿ ಮೂರಿ ವಿಮಾನ ಖರೀದಿಸಿ ಬೆಂಗಳೂರಿನಿಂದ ಮೈಸೂರು, ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿವೆ ವಿಮಾನಯಾನ ಸೇವೆ ಒದಗಿಸುವ ಯೋಚನೆ ಇದೆ. ಈ ಕುರಿತು ವಿಮಾನಯಾನ ಕ್ಷೇತ್ರದ ತಜ್ಞರ ಜತೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.