ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐ ಎ ವಹಿಸಿಕೊಂಡಿದೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಎನ್ ಐ ಎ ತನಿಖೆ ಆರಂಭಿಸಿದೆ. ಎನ್ ಐ ಎ ಅಧಿಕಾರಿಗಳು ಈಗಾಗಲೇ ಉದಯಪುರಕ್ಕೆ ತೆರಳಿದ್ದಾರೆ.
ಈ ಮಧ್ಯೆ ಕನ್ಹಯ್ಯ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ರಾಜ್ಯ ಪೊಲೀಸರ ವೈಫಲ್ಯದಿಂದ ಕನ್ನಯ್ಯ ಅವರ ಹತ್ಯೆ ನಡೆದಿದೆ ಎಂದು ರಾಜಸ್ಥಾನ ಬಿಜೆಪಿ ಘಟಕ ಆರೋಪಿಸಿದೆ.
ಉದಯಪುರದಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿಯೇ ಮುಂದುವರಿದಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
Previous Articleದೇಶದಲ್ಲಿ 14,506 ಜನರಿಗೆ ಕೊರೋನಾ ಸೋಂಕು, 30 ಮಂದಿ ಸಾವು
Next Article ಎರಡು ಸಾವಿರ ಹುದ್ದೆ ಭರ್ತಿ..