ಬೆಂಗಳೂರು.
ರಾಜಧಾನಿ ಮಹಾನಗರ ಬೆಂಗಳೂರಿನ ವಾಹನ ಸವಾರರೇ ಎಚ್ಚರ. ಇನ್ನು ಮುಂದೆ ನಿಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿದರೆ ಅಥವಾ ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆ ಮಾಡಿದರೆ ಅವುಗಳನ್ನು ಟೋಯಿಂಗ್ ಮಾಡಲಾಗುತ್ತದೆ.
ಈ ಹಿಂದೆ ಜಾರಿಯಲ್ಲಿದ್ದ ಟೋಯಿಂಗ್ ವ್ಯವಸ್ಥೆ ಇದೀಗ ಬದಲಾದ ನಿಯಮಾವಳಿಗಳ ಪ್ರಕಾರ ಮತ್ತೆ ಜಾರಿಗೆ ಬರುತ್ತಿದೆ ಬೆಂಗಳೂರು ನಗರ ಸಂಚಾರ ಪೊಲೀಸ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಂಟಿಯಾಗಿ ಈ ಬಾರಿ ಟೋಯಿಂಗ್ ವ್ಯವಸ್ಥೆ ಜಾರಿ ಮಾಡುತ್ತಿವೆ.
ಈ ಮೊದಲು ಬೆಂಗಳೂರು ಸಂಚಾರಿ ಪೊಲೀಸ್ ಖಾಸಗಿ ಗುತ್ತಿಗೆದಾರರೊಂದಿಗೆ ಸೇರಿ ಟೋಯಿಂಗ್ ವ್ಯವಸ್ಥೆ ನಿರ್ವಹಣೆ ಮಾಡುತ್ತಿತ್ತು ಆದರೆ ಇದರಲ್ಲಿ ವ್ಯಾಪಕ ಪ್ರಮಾಣದ ಬ್ರಷ್ಟಾಚಾರ ಮತ್ತು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದಲ್ಲಿ ಅದನ್ನು ರದ್ದುಪಡಿಸಲಾಗಿತ್ತು ಇದೀಗ ಸಂಪೂರ್ಣ ನಿಯಮಾವಳಿಗಳನ್ನು ಬದಲಾಯಿಸಿ ಟೋಯಿಂಗ್ ಪದ್ಧತಿ ಜಾರಿಗೆ ಬರುತ್ತದೆ ಹೀಗಾಗಿ ಇನ್ನು ಮುಂದೆ ನೀವು ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿರಿ
ಈಗ ಇದು ಪ್ರಾಯೋಗಿಕವಾಗಿ ಕೇಂದ್ರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.
ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಮಾರ್ಗಸೂಚಿ ಅನ್ವಯವೇ ಮೊದಲು ಮೈಕ್‌ನಲ್ಲಿಅನೌನ್ಸ್ ಮಾಡಿ ಟೋಯಿಂಗ್ ಮಾಡಲಾಗುವುದು. ಟೋಯಿಂಗ್ ವಾಹನಕ್ಕೆ ನೋ ಪಾರ್ಕಿಂಗ್ ಉಲ್ಲಂಘನೆಯ 500 ರೂ. ದಂಡವಿರಲಿದ್ದು, ಅದು ಪೋಲಿಸ್ ಇಲಾಖೆಗೆ ಪಾವತಿಯಾಗಲಿದೆ. ಉಳಿದಂತೆ ಟೋಯಿಂಗ್ ಶುಲ್ಕ ಬೈಕ್‌ಗೆ 650 ಹಾಗೂ ಕಾರು ಸೇರಿ ಇತರ ವಾಹನಗಳಿಗೆ 1000 ರೂ.ಶುಲ್ಕವಿದ್ದು ಆ ಮೊತ್ತವು ಆಯಾ ಪಾಲಿಕೆಗಳಿಗೆ ಸಂದಾಯವಾಗಲಿದೆ.
ಅಂದರೆ ನೋ ಪಾರ್ಕಿಂಗ್ ಪ್ರದೇಶದಲ್ಲಿ ಬೈಕ್ ನಿಲುಗಡೆ ಮಾಡಿದರೆ 1150 ರೂಪಾಯಿ ದಂಡ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 1500 ರೂಪಾಯಿ ದಂಡ ನೀಡಬೇಕಾಗುತ್ತದೆ.

