ಅಕ್ಟೋಬರ್, 31
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149 ನೇ ಜನ್ಮ ದಿನದ ಸ್ಮರಣಾರ್ಥ ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ (National Unity Day) ವನ್ನು ಆಚರಿಸಲಾಗುತ್ತಿದ್ದು, ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ದೇಶದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನೋತ್ಸವವನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಭಾರತ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014 ರಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಪರಿಚಯಿಸಿದರು.
ಗುಜರಾತಿನ ನಾಡಿಯಾಡ್ನಲ್ಲಿ 1875ರಲ್ಲಿ ಜನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಭಾರತ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದರು. ಭಾರತವನ್ನು ಏಕೀಕರಿಸುವಲ್ಲಿ ಶ್ರಮಿಸಿದ ಇವರು ಭಾರತದ ಗಣರಾಜ್ಯದ ಸಂಸ್ಥಾಪಕ ನಾಯಕರ ಪೈಕಿ ಇವರೂ ಒಬ್ಬರು.
ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಗಾಂಧೀಜಿಯವರ ಕೆಳಗೆ ಭಾರತೀಯ ರಾಷ್ಟೀಯ ಕಾಂಗ್ರೆಸ್ನ ಮುಖ್ಯ ನಿರ್ವಾಹಕರಾಗಿದ್ದರು. ಇವರ ಪ್ರಯತ್ನಗಳಿಂದಲೇ 1937ರ ಮತದಾನದಲ್ಲಿ ಕಾಂಗ್ರೆಸ್ ಶೇ.100% ಜಯ ಸಾಧಿಸಿತು. ಸರ್ದಾರ್ ಪಟೇಲ್ ಅವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಯಿಂದ ಹಿಂದಕ್ಕೆ ಸರಿದು ಜವಾಹರಲಾಲ್ ನೆಹರು ಅವರಿಗೆ ದಾರಿ ಮಾಡಿಕೊಟ್ಟರು.
ಭಾರತದಲ್ಲಿ ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ಸಣ್ಣ ಸಣ್ಣ ಸಂಸ್ಥಾನಗಳನ್ನು ಒಂದುಗೂಡಿಸಿ ಆದುನಿಕ ಭಾರತ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಭಾರತದ ‘ಉಕ್ಕಿನ ಮನುಷ್ಯ’ ರೆಂದೇ ಅಮರರಾದರು.
ಗುಜರಾತಿನ ಜನರಿಂದ ಗೌರವಾರ್ಥವಾಗಿ ‘ಸರ್ದಾರ್’ ಎಂಬ ಬಿರುದು ಪಡೆದರು. ಸರ್ದಾರ್ ಪಟೇಲರಿಗೆ 1991 (ಮರಣೋತ್ತರ) ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.