ಚೆನ್ನೈ(ತಮಿಳುನಾಡು): ಅಂಡಾಣು ಮಾರಾಟ ಜಾಲವೊಂದು ಪತ್ತೆಯಾಗಿದ್ದು, ಈ ಸಂಬಂಧ ತಮಿಳುನಾಡು ಆರೋಗ್ಯ ಇಲಾಖೆ ನಾಲ್ಕು ಆಸ್ಪತ್ರೆಗಳಿಗೆ ಬೀಗ ಜಡಿದಿದೆ.
ಈ ಆಸ್ಪತ್ರೆಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. 18 ರಿಂದ 20 ವಯಸ್ಸಿನ ಯುವತಿಯರ ಅಂಡಾಣುವನ್ನು ಶೇಖರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ 16 ವರ್ಷ ವಯಸ್ಸಿನವರೂ ಹೆಚ್ಚಿನವರಿದ್ದಾರೆ ಎನ್ನಲಾಗಿದೆ.
ಕಾನೂನಿನಲ್ಲಿ 21 ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಅಂಡಾಣು ನೀಡಲು ಅವಕಾಶವಿದೆ. ಆದರೆ ಇಲ್ಲಿ ಸಣ್ಣ ವಯಸ್ಸಿನವರಿಂದಲೂ ಬಲವಂತವಾಗಿ ಅಂಡಾಣು ಶೇಖರಿಸಿ ಮಾರಾಟ ಮಾಡುತ್ತಿದ್ದುದರಿಂದ ನಾಲ್ಕು ಆಸ್ಪತ್ರೆಗಳಿಗೆ ಬೀಗ ಜಡಿದು ತನಿಖೆಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವಯಸ್ಕಳೆಂದು ತೋರಿಸಲು ಆಧಾರ್ ಕಾರ್ಡ್ ನಕಲಿ ಮಾಡಲಾಗಿದೆ. ಗಂಡನೂ ಇದ್ದಾನೆ ಎಂದು ದಾಖಲೆಗಳಲ್ಲಿ ನಮೂದಿಸುವ ಹೀನ ಕೃತ್ಯದಲ್ಲಿ ಈ ಆಸ್ಪತ್ರೆಗಳು ತೊಡಗಿದ್ದವು ಎಂದು ಸಚಿವರು ತಿಳಿಸಿದ್ದಾರೆ.