ತಪ್ಪು ಮಾಡಬೇಡಿ, ಅಷ್ಟಕ್ಕೂ ತಪ್ಪು ಮಾಡಬೇಕೆಂದು ಅನಿಸಿದರೆ, ಮಾಡಿದ ತಪ್ಪನ್ನು ತಪ್ಪಾಯಿತು ಎಂದು ಒಪ್ಪಿಕೊಳ್ಳುವುದೇ ಪದ್ಮಾವತಿ ಚಿತ್ರದ ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ. ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್ ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಶಿವಳ್ಳಿಬೆಟ್ಟ, ಸಾಗರ, ಹೊಸನಗರ, ಬೆಂಗಳೂರು ಕಡೆಗಳಲ್ಲಿ 52 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ತಲೆ ಬಾಚ್ಕೋಳ್ಳಿ ಪೌಡ್ರು ಹಾಕ್ಕೋಳ್ಳಿ ಚಿತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದ ವಿಕ್ರಂಆರ್ಯ ಗ್ಯಾಪ್ ನಂತರ ನಾಯಕ ಮತ್ತು ನಾಮದೇವಭಟ್ಟರ್ ಹೆಸರಿನಲ್ಲಿ ಪಾಲುದಾರರಾಗಿದ್ದು, ಮಿಲಿಟರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಯುವತಿ, ಮಧ್ಯವಯಸ್ಸಿನ ಮಹಿಳೆ ಮತ್ತು 46 ವರ್ಷದವಳಾಗಿ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಸಾಕ್ಷಿಮೇಘನಾ ನಾಯಕಿ. ಉಳಿದಂತೆ ನಭಿರಸುಲ್, ಸುರೇಶ್ ಸ್ವಾಮಿರಾವ್, ಶರಣ್, ಅಭಿಲಾಶ್.ಬಿ.ಹೊಸನಗರ, ಶಿವಮೊಗ್ಗ ರಾಮಣ್ಣ, ಅರ್ಚನಾಶೆಟ್ಟಿ ಮುಂತಾದವರ ತಾರಗಣವಿದೆ. ಪುಟ್ಟರಾಜಗವಾಯಿ ಆಶ್ರಮದ ವಿದ್ಯಾರ್ಥಿಯಾಗಿದ್ದ ಪ್ರೇಮಸಾಯಿ ಎಂಟು ಹಾಡುಗಳಿಗೆ ಸಾಹಿತ್ಯ ಒದಗಿಸಿ ಆರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಸಂಗೀತ ದಿನೇಶ್‍ಕುಮಾರ್, ಛಾಯಾಗ್ರಹಣ ಕೆ.ಎಂ.ಶೋಯಿಬ್‍ಅಹ್ಮದ್, ಕತೆ ಲತಾ.ಎಸ್, ಸಂಕಲನ ಈಶ್ವರ್, ಸಾಹಸ ಥ್ರಿಲ್ಲರ್ ಮಂಜು ನೃತ್ಯ ತ್ರಿಭುವನ್ ಅವರದಾಗಿದೆ. ರಾವ್ ಅಂಡ್ ರಾವ್ಸ್ ಸಿನಿಮಾಸ್ ಮುಖಾಂತರ ದಾಮೋದರಪಾರಗೆ ಬಂಡವಾಳ ಹೂಡಿರುವ ಸಿನಿಮಾವು ಮುಂದಿನ ತಿಂಗಳು ತೆರೆ ಕಾಣುವ ಸಾದ್ಯತೆ ಇದೆ.