ನವದೆಹಲಿ
ಗಡಿಯಲ್ಲಿ ಪಾಕಿಸ್ತಾನ (Pakistan) ಮತ್ತೆ ಕಿತಾಪತಿ ನಡೆಸಿದೆ. ಚೀನಾ ನಿರ್ಮಿತ ಶಸ್ತ್ರಾಸ್ತ್ರ (Chinese weapons) ಹಾಗೂ ಮಾದಕವಸ್ತುಗಳ ಸಂಗ್ರಹವನ್ನು ಎಸೆದು ಪರಾರಿಯಾಗಿದೆ. ಪಂಜಾಬ್ (Punjab) ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‍ನಿಂದ ಬಿದ್ದಿದೆ ಎನ್ನಲಾದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸಂಗ್ರಹವನ್ನು ಗಡಿ ಭದ್ರತಾ ಪಡೆ (Border Security Force – BSF) ವಶಪಡಿಸಿಕೊಂಡಿದೆ.
ಫಿರೋಜ್‍ಪುರ (Ferozepur) ಸೆಕ್ಟರ್ ನ ಗಡಿ ಪೋಸ್ಟ್ ನಲ್ಲಿರುವ ಎಂಡಬ್ಲ್ಯೂ ಭೂಪ್ರದೇಶ (M W Terrain) ದೊಳಗೆ ಬಂದ ಪಾಕ್ ಡ್ರೋನ್ ಈ ವಸ್ತುಗಳನ್ನು ಎಸೆದಿದೆ ಎನ್ನಲಾಗಿದೆ. ಡ್ರೋನ್ ಹಾರಾಟ ಗಮನಿಸಿದ BSF ಯೋಧರು ಗುಂಡು ಹಾರಿಸಿದ್ದಾರೆ. ಈ ವೇಳೆ ಡ್ರೋನ್ ನಿಂದ ಕೆಲ ವಸ್ತುಗಳು ಕೆಳಗೆ ಬಿದ್ದಿವೆ ಎನ್ನಲಾಗಿದೆ. ಅದನ್ನು BSF ಸಿಬ್ಬಂದಿ ಪರಿಶೀಲಿಸಿದ್ದು, ಇದರಲ್ಲಿ ಸುಮಾರು 3 ಕೆಜಿ ಹೆರಾಯಿನ್ (Heroin), ಒಂದು ಚೈನೀಸ್ ಪಿಸ್ತೂಲ್, ಐದು ಕಾರ್ಟ್ರಿಜ್ಗಳು ಮತ್ತು ಡ್ರೋನ್‍ನಿಂದ ಬೀಳಿಸಲಾದ ಮ್ಯಾಗಜೀನ್ ಒಳಗೊಂಡ ಪ್ಯಾಕೆಟ್ ಇತ್ತು ಎನ್ನಲಾಗಿದೆ.