ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವೆಂಟಿಲೇಟರ್‌ನಲ್ಲಿದ್ದು, ಅವರು ನಿಧನ ಹೊಂದಿದ್ದಾರೆ ಎಂದು ಕೆಲ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 78 ರ ಹರೆಯದ ಮುಷರಫ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ನಂತರ ದುಬೈನಲ್ಲಿರುವ ಅಮೆರಿಕದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಇದನ್ನೇ ತಪ್ಪಾಗಿ ಗ್ರಹಿಸಿದ ಪಾಕ್ ಮಾಧ್ಯಮಗಳು ನಿಧನ ಸುದ್ದಿ ಪ್ರಕಟಿಸಿದ್ದವು.
ಅವರನ್ನು ನೋಡಲು ಅವರ ಕುಟುಂಬ ಸದಸ್ಯರು ಈಗಾಗಲೇ ದುಬೈಗೆ ಆಗಮಿಸಿದೆ ಎಂದು ವರದಿ ಮಾಡಿವೆ.
ಅವರು ಆಸ್ಪತ್ರೆಗೆ ದಾಖಲಾದ ತಕ್ಷಣ, ಮುಷರಫ್ ಸಾವಿನ ಬಗ್ಗೆ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.
ಮುಷರಫ್ ಅಂಗಾಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ, ಚೇತರಿಕೆ ಸಾಧ್ಯವಿಲ್ಲ ಎಂದು ಪರ್ವೇಜ್ ಮುಷರಫ್ ಕುಟುಂಬ ಹೇಳಿದೆ.
ಅವರು ವೆಂಟಿಲೇಟರ್‌ನಲ್ಲಿಲ್ಲ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲೋಡೋಸಿಸ್) ತೊಡಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಕಠಿಣ ಹಂತದಲ್ಲಿದ್ದಾರೆ. ಅವರ ದಿನನಿತ್ಯದ ಜೀವನ ಸುಗಮವಾಗಿರಲಿ ಎಂದು ಪ್ರಾರ್ಥಿಸಿ ಎಂದು ಪರ್ವೇಜ್ ಮುಷರಫ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆಯಲಾಗಿದೆ.