ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ದಂತಕಥೆ ಪೇಲೆ ಅವರು ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ಗುರುವಾರ ತಡರಾತ್ರಿ Instagram ನಲ್ಲಿ ಖಚಿತಪಡಿಸಿದ್ದಾರೆ. ಬ್ರೆಜಿಲ್ ನ ಮಾಜಿ ಫುಟ್ಬಾಲ್ ಆಟಗಾರ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಕೀಮೊಥೆರಪಿ ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ ನಂತರ ಕರುಳಿನ ಕ್ಯಾನ್ಸರ್ ನ ಕಾರಣದಿಂದಾಗಿ ನಿಧನರಾದರು. ಅವರ ಕ್ಯಾನ್ಸರ್ ಚಿಕಿತ್ಸೆಯನ್ನು ಹೇಗೆ ಬದಲಾಯಿಸಬೇಕು ಎನ್ನುವ ಕಾರಣದಿಂದ ಅವರನ್ನು ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು ಆಗ ಅವರಿಗೆ ಉಸಿರಾಟದ ಸೋಂಕು ಇರುವುದು ಪತ್ತೆಯಾಯಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೇಲೆ ಅವರ ದೊಡ್ಡ ಕರುಳಿನಿಂದ ಗೆಡ್ಡೆಯನ್ನು ತೆಗೆದುಹಾಕಲಾಯಿತು. ಆನಂತರ ಅವರು ನಿಯಮಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಮೂರು ಬಾರಿ ಫುಟ್ಬಾಲ್ ವಿಶ್ವ ಕಪ್ ಅನ್ನು ತಮ್ಮ ದೇಶ ಬ್ರೆಜಿಲ್ ಗೆ ಗೆದ್ದುಕೊಟ್ಟಿರುವುದು ವಿಶೇಷ.
Previous ArticleRashmika ಇದ್ಯಾಕೆ ಹೀಗೆ?
Next Article New Year ಕೊಡುಗೆ: Current bill ಇಳಿಕೆ