ಬೆಂಗಳೂರು,ಅ.3-ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಸಾರ್ವಜನಿಕರು ವಿದ್ಯುತ್ ಧರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ ಧರ ಹೆಚ್ಚಳ ಆದೇಶ ತಡೆಹಿಡಿಯಲು ಇಂಧನ ಇಲಾಖೆ ಚಿಂತನೆ ನಡೆಸಿದೆ.
ಧರ ಹೆಚ್ಚಳ ಆದೇಶ ತಡೆ ಹಿಡಿಯುವ ನಿರ್ಧಾರದಿಂದ ವಿದ್ಯುತ್ ವಿತರಣಾ ಸಂಸ್ಥೆಗಳು ಎದುರಿಸುವ ನಷ್ಟವನ್ನು ರಾಜ್ಯ ಸರ್ಕಾರ ಭರಿಸುವಂತೆ ಹಣಕಾಸು ಇಲಾಖೆ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಇಂಧನ ಸಚಿವ ಸುನಿಲ್ ಕುಮಾರ್, ದಸರಾ ಹಬ್ಬದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಚರ್ಚಿಸಲಾಗುವುದು ಈ ಕುರಿತಂತೆ ಸಾರ್ವಜನಿಕರ ಆಕ್ರೋಶದ ಬಗ್ಗೆ ಅವರಿಗೂ ಮಾಹಿತಿಯಿದೆ ಎಂದು ಹೇಳಿದರು.
ಹೀಗಾಗಿ ಧರ ಹೆಚ್ಚಳ ನಿರ್ಧಾರ ವಾಪಸ್ ಆಗಲಿದೆ ಎಂದು ಹೇಳಲಾಗುತ್ತಿದೆ.ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಕೋರಿಕೆಯಂತೆ ಪ್ರತಿ ಯೂನಿಟ್‍ಗೆ 23ರಿಂದ 43 ಪೈಸೆ ಬೆಲೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿತ್ತು.
ನೂತನ ದರದಂತೆ ಪ್ರತಿ ಯೂನಿಟ್‍ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 24 ಪೈಸೆ, ಸೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 32 ಪೈಸೆ ಹಾಗೂ ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆಗೆ ಏರಿಕೆಯಾಗಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಮನೆಗೆ 500 ರೂ. ಇದ್ದರೆ 40 ರೂ. ಹೆಚ್ಚಳ ಮಾಡಿದ್ದರೆ, 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ 1,080 ರೂ.ಏರಿಕೆಯಾಗುವುದಾಗಿ ಹೇಳಿತ್ತು.
ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ಕಂಪನಿಗಳು ನಷ್ಟದಲ್ಲಿದ್ದು ಇದನ್ನು ಸರಿದೂಗಿಸಲು ದರ ಹೆಚ್ಚಳ ಮಾಡಬೇಕೆಂದು ಕೆಇಆರ್‍ಸಿಗೆ ಮನವಿ ಮಾಡಿಕೊಂಡಿತ್ತು. ಇದನ್ನು ವಿದ್ಯುತ್ ಕಂಪನಿಗಳ ಕೋರಿಕೆಯಂತೆ ಕೆಇಆರ್‍ಸಿ ಆಯಾ ವ್ಯಾಪ್ತಿಯ ಪರಿಸ್ಥಿತಿಗನುಗುಣವಾಗಿ 23ರಿಂದ 43 ಪೈಸೆಯನ್ನು ಪ್ರತಿ ಯೂನಿಟ್‍ಗೆ ಹೆಚ್ಚಳ ಮಾಡಿತ್ತು.
2022 ಜೂನ್‍ನಲ್ಲಿ ಪ್ರತಿ ಯೂನಿಟ್‍ಗೆ 31 ಪೈಸೆ ಏರಿಕೆ ಮಾಡಲಾಗಿತ್ತು. ಇದಕ್ಕೆ ಇಂಧನ ಹೊಂದಾಣಿಕೆ ಶುಲ್ಕ ಎಂದು ಕಾರಣವನ್ನು ನೀಡಿತ್ತು.
Previous Articleಖರ್ಗೆ ಬಿಟ್ಟರೆ ಕಾಂಗ್ರೆಸ್ ಗೆ ಪರ್ಯಾಯವಿಲ್ಲ
Next Article ಅಪ್ಪನ ಸಾಲಕ್ಕೆ ಮಗನ ಬೆತ್ತಲೆ ಪೂಜೆ