ಬ್ರಿಟನ್ನಿನ ರಾಣಿ ಎರಡನೇ ಎಲಿಜಬೆತ್ ಅವರು ವಿಧಿವಶರಾಗುವುದರೊಂದಿಗೆ ಅವರ ಜ್ಯೇಷ್ಠ ಪುತ್ರ ರಾಜಕುಮಾರ ಚಾರ್ಲ್ಸ್ ಅವರು ಮುಂದಿನ ಸಾಮ್ರಾಟ ಎಂದು ಘೋಷಿಸಲ್ಪಟ್ಟಿದ್ದಾರೆ. ಈ ವಿಷಯವನ್ನು ತಮ್ಮ ಶ್ರದ್ಧಾಂಜಲಿ ಹೇಳಿಕೆಯಲ್ಲಿ ಬ್ರಿಟನ್ನಿನ ಪ್ರಧಾನಿ ಲಿಜ್ ಟ್ರಸ್ ಅವರು ಘೋಷಿಸಿದ್ದಾರೆ ಮತ್ತು ಚಾರ್ಲ್ಸ್ ಅವರಿಗೆ ತಮ್ಮ ನಿಷ್ಠೆ ಇದೆ ಎಂದೂ ಅವರು ಹೇಳಿದ್ದಾರೆ. ಒಂದು ಸಾವಿರ ವರ್ಷಗಳ ದೀರ್ಘ ಇತಿಹಾಸವಿರುವ ಬ್ರಿಟಿಷ್ ರಾಜಾಡಳಿತ ಈಗ ಬರಿ ಸಾಂವಿಧಾನಿಕ ರಾಜಾಧಿಕಾರ ಮಾತ್ರ ಆಗಿದ್ದು ಸಾಮ್ರಾಟರು ಜನರು ಆರಿಸಿದ ಸರ್ಕಾರ ಹೇಳಿದ ರೀತಿಯಲ್ಲಿ ನಡೆದುಕೊಳ್ಳುವವರಾಗಿದ್ದರೆ. ಪ್ರಿನ್ಸ್ ಚಾರ್ಲ್ ಅವರನ್ನು ಮೂರನೇ ಚಾರ್ಲ್ಸ್ ಎಂದು ಘೋಷಿಸಿ ಸಾಮ್ರಾಟನೆಂದು ನೇಮಕ ಮಾಡಲಾಗಿದೆ.