ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಎರ್ನಾಕುಲಂ ಸೌತ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ನಟ-ನಿರ್ಮಾಪಕ ವಿಜಯ್‌ಬಾಬು ಅವರನ್ನು ಕೊಚ್ಚಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಟಿಯೊಬ್ಬರು ಸಿನಿಮಾ ಪಾತ್ರಗಳನ್ನು ನೀಡುವ ಕುರಿತಾಗಿ ಹೇಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು.
ನಟ ವಿಜಯ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವಾಗ, ಕೇರಳ ಹೈಕೋರ್ಟ್ ಈ ಸಮಯದಲ್ಲಿ ರಾಜ್ಯವನ್ನು ತೊರೆಯದಂತೆ ಮತ್ತು ಪಾಸ್‌ಪೋರ್ಟ್ ಮರಳಿಸುವಂತೆ ಕೇಳಿತ್ತು. ಇಂದಿನಿಂದ(ಜೂ.27) ಜುಲೈ 3 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಅವರನ್ನು ಪ್ರಶ್ನಿಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ.
ದುಬೈಯಲ್ಲಿದ್ದ ವಿಜಯ್ ಭಾರತಕ್ಕೆ ಮರಳಿದ್ದು, ವಿಚಾರಣೆಗಾಗಿ ಎರ್ನಾಕುಲಂ ಠಾಣೆಗೆ ಹಾಜರಾಗಿದ್ದಾಗ ವಶಕ್ಕೆ ಪಡೆಯಲಾಗಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೊರ್ಟ್ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಸ್ಟೇಷನ್ ಬೇಲ್ ಮೇಲೆ ವಿಜಯ್ ಬಿಡುಗಡೆಯಾಗುವ ಸಾಧ್ಯತೆಯಿದೆ