Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Psi ನೇಮಕ ಅಕ್ರಮ- ತೀವ್ರ ಶೋಧ
    ಸುದ್ದಿ

    Psi ನೇಮಕ ಅಕ್ರಮ- ತೀವ್ರ ಶೋಧ

    vartha chakraBy vartha chakraಮೇ 25, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮೇ.25- ಪಿಎಸ್​ಐ ನೇಮಕಾತಿ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ‌ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್​ಪಿ ಶಾಂತಕುಮಾರ್ ರನ್ನು ಮತ್ತೆ ಮೂರು ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.
    ಸಿಐಡಿ ಕಸ್ಟಡಿಗೆ ನೀಡಿದ್ದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ನಿನ್ನೆ ಶಾಂತಕುಮಾರ್ ರನ್ನು ನಗರದ 1ನೇ ಎಸಿಎಂಎಂ ಕೋರ್ಟ್​ಗೆ ಸಿಐಡಿ ಹಾಜರುಪಡಿಸಿತ್ತು. ಸಿಐಡಿ ಪರ ವಕೀಲರ ಮನವಿ ಮೇರೆಗೆ ನ್ಯಾಯಾಲಯವು ಮತ್ತೆ ಮೂರು ದಿನ ಕಸ್ಟಡಿಗೆ ಶಾಂತಕುಮಾರ್​ರನ್ನು ಪಡೆದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
    ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯನ್ನು ಸಿಐಡಿ ಬಂಧಿಸಿದೆ. ಇವರೆಲ್ಲರೂ ನೇಮಕಾತಿ ವಿಭಾಗದ ಡಿವೈಎಸ್​ಪಿ ಶಾಂತಕುಮಾರ್​ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಬಂಧಿತ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಎಎಚ್​ಸಿ ಶ್ರೀಧರ್ ಬಳಿ ಸುಮಾರು 2 ಕೋಟಿ ನಗದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಪಡೆಯಲಾಗಿತ್ತು ಎಂಬ ಅಂಶವೂ ತನಿಖೆ ವೇಳೆ ಪತ್ತೆಯಾಗಿದೆ
    ಏಜೆಂಟ್​ಗಳಿಂದ ಹಣ:
    ಐದರಿಂದ ಆರು ಅಭ್ಯರ್ಥಿಗಳಿಗೆ ಸೇರಿದ್ದ ಹಣ ಮಾತ್ರ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಗುಮಾಸ್ತ ಹರ್ಷನ ಮೂಲಕವೂ ಸಾಕಷ್ಟು ಅಕ್ರಮ ನಡೆದಿರುವುದು ಪತ್ತೆಯಾಗಿದೆ.
    ರಾಜ್ಯದ ಹಲವು ಏಜೆಂಟ್​ಗಳ ಮೂಲಕ ನೇಮಕಾತಿ ವಿಭಾಗಕ್ಕೆ ಹಣ ಪಾವತಿಯಾಗುತ್ತಿತ್ತು ಎಂಬ ಸಂಗತಿ ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
    ನೇಮಕಾತಿ ವಿಭಾಗದ ಯಾವ ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ಪಡೆದು ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿ ಪರಿಣಮಿಸಿದೆ. ಏಜೆಂಟ್​ಗಳ ಮೂಲಕ ನಗದು ರೂಪದಲ್ಲಿ ಹಣ ಚಲಾವಣೆಯಾಗಿದೆ.
    ಆರೋಪಿಗಳಿಗೆ ಶೋಧ:
    ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸುತ್ತಿರುವ ಸಿಐಡಿ ಅಧಿಕಾರಿಗಳು ಅವರ ಮೂಲಕವೇ ಯಾರೆಲ್ಲಾ ಹಣ ಪಡೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದು, ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
    ಈ ನಡುವೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರುದ್ರಗೌಡ ಪಾಟೀಲನನ್ನು ಸಿಐಡಿ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯವು 7 ದಿನಗಳು ವಶದಲ್ಲಿ ಇರಿಸಿಕೊಳ್ಳಲು ಸಿಐಡಿಗೆ ಅನುಮತಿ ನೀಡಿದೆ. ರುದ್ರಗೌಡ ಪಾಟೀಲ್​ನನ್ನು ಕಲಬುರಗಿಯ ಐವಾನ್​ ಇ ಶಾಹಿ ಅತಿಥಿಗೃಹದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
    ಮಧ್ಯವರ್ತಿಗಳಿಗೆ ಶೋಧ:
    ಕಳೆದ ಏಪ್ರಿಲ್ 23ರಂದು ರುದ್ರಗೌಡ ಪಾಟೀಲ್​ನನ್ನು ಸಿಐಡಿ ಬಂಧಿಸಿತ್ತು. ರುದ್ರಗೌಡ ಪಾಟೀಲನ​ ಸಹಾಯದಿಂದ ಹಲವು ಅಭ್ಯರ್ಥಿಗಳು ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದರು. ಇಂಥ ಹಲವು ಅಭ್ಯರ್ಥಿಗಳು ಮತ್ತು ಅಕ್ರಮಕ್ಕೆ ನೆರವಾಗಿದ್ದ ಸಿಬ್ಬಂದಿ, ಮಧ್ಯವರ್ತಿಗಳನ್ನು ಶೀಘ್ರ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.

    Verbattle
    Verbattle
    Verbattle
    psi selection
    Share. Facebook Twitter Pinterest LinkedIn Tumblr Email WhatsApp
    Previous Articleಹಿಂದೂ ಧಾರ್ಮಿಕ ಸ್ಥಳ ಅಸ್ತಿತ್ವ: ತಾಂಬೂಲ ಪ್ರಶ್ನೆಯಲ್ಲೂ ಸಾಬೀತು
    Next Article ಕುಂದಾಪುರದ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ
    vartha chakra
    • Website

    Related Posts

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಫೆಬ್ರವರಿ 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಫೆಬ್ರವರಿ 17, 2026

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಫೆಬ್ರವರಿ 17, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Qyugwb ರಲ್ಲಿ ಶಕ್ತಿಯಿಂದ ಬಸ್ಸುಗಳಿಗೆ Full demand | Shakti Scheme
    • Tracymix ರಲ್ಲಿ ಕಾಂಗ್ರೆಸ್ ಮುಗ್ಗರಿಸಿದರೆ ಸುರ್ಜೆವಾಲಾ ಹೊಣೆ! Congress
    • LinwoodGah ರಲ್ಲಿ ನಾನವಳಲ್ಲ ..ನಾನವಳಲ್ಲ.. ಬಿಟ್ಟುಬಿಡಿ
    Latest Kannada News

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ಫೆಬ್ರವರಿ 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಫೆಬ್ರವರಿ 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಫೆಬ್ರವರಿ 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.