Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » PSI ನೇಮಕಾತಿಗೆ ನಡೆದಿತ್ತು ಭರ್ಜರಿ ಪ್ಲಾನ್..
    ಸುದ್ದಿ

    PSI ನೇಮಕಾತಿಗೆ ನಡೆದಿತ್ತು ಭರ್ಜರಿ ಪ್ಲಾನ್..

    vartha chakraBy vartha chakraಆಗಷ್ಟ್ 23, 2022Updated:ಆಗಷ್ಟ್ 23, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಆ.23– 545 ಮಂದಿ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ)ನೇಮಕ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದೆ.
    ಪಿಎಸ್ಐ ಅಕ್ರಮ ಪರೀಕ್ಷಾ ಒಳ ಸಂಚಿನ ಹಣದ ವರ್ಗಾವಣೆ, ಸಂಗ್ರಹದ ಕುರಿತು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.
    ಅಕ್ರಮದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಎಡಿಜಿಪಿ ಅಮ್ರಿತ್ ಪಾಲ್ ಕೃತ್ಯದಲ್ಲಿ ಭಾಗಿಯಾಗಿರುವ ನೇಮಕಾತಿ ವಿಭಾಗದ ಸಿಬ್ಬಂದಿಗಳ ಕರ್ತವ್ಯ ಹಂಚಿಕೆ ಮಾಡಿದ್ದಾರೆ. ಅದರಂತೆ ಡಿವೈಎಸ್​ಪಿ ಶಾಂತಕುಮಾರ್, ಪಿಎ ಡಿ.ಸಿ.ಶೀನಿವಾಸ್, ಎಹೆಎಚ್​ಸಿ ಶ್ರೀಧರ್, ಎಫ್​ಡಿಎ ಹರ್ಷಾಗೆ ಮೌಖಿಕವಾಗಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ.
    ಆ ಮೂಲಕ ಅಪರಾಧಿಕ ಒಳ ಸಂಚು ರೂಪಿಸಿ ಅನರ್ಹ ಅಭ್ಯರ್ಥಿಗಳನ್ನು ಅರ್ಹರನ್ನಾಗಿಸಿ ನೇಮಿಸಲು ಯತ್ನಿಸಲಾಗಿದೆ. ಹಣದಾಸೆಗೆ ಅಕ್ರಮ ಕೂಟ ರಚಿಸಿಕೊಂಡು ಕುಕೃತ್ಯ ಎಸಗಿರುವ ಆರೋಪಿಗಳು, ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ, ಉಳಿದಂತೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.
    30 ಲಕ್ಷ ಹಣ ಸಂಗ್ರಹ:
    ಪಿಎಸ್ಐ ಅಕ್ರಮ ನೇಮಕಾತಿ ಹಣ ಸಂಗ್ರಹದ ಹೊಣೆಯನ್ನು ಡಿವೈಎಸ್​ಪಿ ಶಾಂತಕುಮಾರ್ ಹೊತ್ತಿದ್ದರು. ಇವರು ನೇಮಕಾತಿ ವಿಭಾಗದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ. 545 ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಆರೋಪಿ ಎಡಿಜಿಪಿ ಅಮ್ರಿತ್ ಪಾಲ್ 5 ಕೋಟಿ ಹಣ ನೀಡಿ ಉಳಿದ ಹಣವನ್ನು ಹಂಚಿಕೊಳ್ಳಲು ಸೂಚಿಸಿದ್ದಾಗಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಿ ಕರೆತರುವ ಕೆಲಸವನ್ನು ಎಫ್​ಡಿಎ ಹರ್ಷಾ ಮಾಡುತ್ತಿದ್ದರು.
    ಸ್ವ ಇಚ್ಚಾ ಹೇಳಿಕೆ:
    ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳಿಂದ ಸಂಗ್ರಹಿಸಿದ್ದ ಹಣವನ್ನು 2021 ರ ಅಕ್ಟೋಬರ್ 1 ರಂದು ಎಫ್​ಡಿಎ ಹರ್ಷ ಅವರಿಂದ ಡಿವೈಎಸ್​ಪಿ ಶಾಂತಕುಮಾರ್​​ಗೆ ವರ್ಗಾವಣೆ ಮಾಡಲಾಗಿದೆ. ಹಡ್ಸನ್ ಸರ್ಕಲ್​ನ ಕೃಷಿ ಭವನ ಬಳಿ 1 ಕೋಟಿ 35 ಲಕ್ಷ ನೀಡಿದ್ದಾಗಿ ಸ್ವ ಇಚ್ಚಾ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಅದೇ ದಿನ ಎಡಿಜಿಪಿ ಅಮ್ರಿತ್ ಪಾಲ್​ಗೂ ಹಣ ವರ್ಗಾವಣೆಯಾಗಿದ್ದು, ಸಿಐಡಿ ಕಚೇರಿ ಸಮೀಪದ ಕೋಡಿ‌ಮುನೇಶ್ವರ ದೇವಾಲಯ ಬಳಿ ಹಣ ವರ್ಗಾವಣೆ ಮಾಡಲಾಗಿದೆ. ಅಕ್ಟೋಬರ್ 1ರ ಮಧ್ಯಾಹ್ನ 3.30ಕ್ಕೆ ಕಾರು ನಿಲ್ಲಿಸಿ ಶಾಂತಕುಮಾರ್​ ಅವರಿಂದ ಅಮ್ರಿತ್ ಪಾಲ್ ಅವರು ಹಣ ಪಡೆದಿದ್ದಾರೆ.
    ಆರೋಪಿಗಳ ತಂಡ:
    ಅಕ್ರಮ ಪರೀಕ್ಷಾ ನೇಮಕಾತಿ ಕುಕೃತ್ಯ ಸಾಕ್ಷಿ ಸಿಗದಂತೆ ಮಾಡಲು ಆರೋಪಿಗಳ ತಂಡ ಪಕ್ಕಾ ಯೋಜನೆಯನ್ನು ರೂಪಿಸಿದ್ದರು. ಅಭ್ಯರ್ಥಿಗಳು ಪರೀಕ್ಷೆ ವೇಳೆ ಬಳಸಿದ್ದ ಪೆನ್​ಗಳನ್ನೇ ಓಎಂಆರ್ ತಿದ್ದಲು ಪಡೆದುಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯ ಕಾರ್ಲಟನ್ ಭವನದ ಸಿಐಡಿ ಕಚೇರಿ ಆವರಣದ ಸೆಲ್ಲರ್​ನಲ್ಲಿ 2021 ರ ಅ. 7 ಮತ್ತು 8 ಮತ್ತು 16 ರಂದು ಸ್ಟ್ರಾಂಗ್ ರೂಂನಲ್ಲಿನ ಓಎಂಆರ್​ ಶೀಟ್​ಗಳನ್ನು ಭರ್ತಿ ಮಾಡಲಾಗಿದೆ.
    ಕ್ಯಾಮಾರ ಸ್ವಿಚ್ ಆಫ್:
    ಕಚೇರಿ ಸಿಬ್ದಂದಿ ಬರುವ ಮುನ್ನ ಅಂದರೆ ಬೆಳಗ್ಗೆ 6:30 ರಿಂದ 9:30 ರ ವೇಳೆಗೆ ಕುಕೃತ್ಯ ನಡೆಸಿದ್ದಾರೆ. ಸಾಕ್ಷ್ಯ ನಾಶಪಡಿಸಲು ಕುಕೃತ್ಯ ಎಸಗಿದ ದಿನಗಳ ಸಿಸಿ ಕ್ಯಾಮಾರ ಸ್ವಿಚ್ ಆಫ್ ಮಾಡಿದ್ದಾರೆ. ಈ ಬಗ್ಗೆ ಎಎಚ್​ಸಿ ಶ್ರೀಧರ್ ನೀಡಿದ ಹೇಳಿಕೆಯನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

    Verbattle
    Verbattle
    Verbattle
    Bangalore ಕಾರು
    Share. Facebook Twitter Pinterest LinkedIn Tumblr Email WhatsApp
    Previous Articleಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯ
    Next Article ಮನೆಯವರು ಮಾತು ಕೇಳಲಿಲ್ಲ ಎಂದು ಹೀಗಾ ಮಾಡೋದು..?
    vartha chakra
    • Website

    Related Posts

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಫೆಬ್ರವರಿ 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಫೆಬ್ರವರಿ 17, 2026

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಫೆಬ್ರವರಿ 17, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Nvcyae ರಲ್ಲಿ ಎಸ್ಕಾರ್ಟ್ ಸರ್ವಿಸ್ ಹೆಸರಲ್ಲಿ ವಂಚಿಸಿದ್ದು ಹೀಗೆ..
    • LeonardReawn ರಲ್ಲಿ ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
    • Tracymix ರಲ್ಲಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್
    Latest Kannada News

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ಫೆಬ್ರವರಿ 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಫೆಬ್ರವರಿ 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಫೆಬ್ರವರಿ 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.